Publish Date: Fri, 13 Mar 2026 (12:52 IST)
Updated Date: Fri, 13 Mar 2026 (12:54 IST)
ನವದೆಹಲಿ: ನಮ್ಮ ಸರ್ಕಾರವಿದ್ದರೂ ಕೆಲಸವಾಗ್ತಿಲ್ಲ ಎಂದು ಕೈ ಶಾಸಕ ನಾರಾಯಣಸ್ವಾಮಿ ನೀಡಿರುವ ಹೇಳಿಕೆ ಉಲ್ಲೇಖಿಸಿ ವಿಪಕ್ಷ ನಾಯಕ ಆರ್ ಅಶೋಕ್ ದಲಿತ ಸಿಎಂ ಎನ್ನುವುದೆಲ್ಲಾ ನಾಟಕ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ವ್ಯಂಗ್ಯ ಮಾಡಿದ್ದಾರೆ.
ಕ್ಷೇತ್ರದ ಕೆಲಸಗಳಿಗೆ ನಾವೇ ಅಧಿಕಾರಿಗಳನ್ನು ಭೇಟಿ ಮಾಡಿದರೂ ಕೆಲಸವಾಗುತ್ತಿಲ್ಲ. ಸಮಸ್ಯೆ ಹೇಳಲು ಹೋದರೆ ಸಚಿವರೂ ಸಿಗುತ್ತಿಲ್ಲ ಎಂದು ಶಾಸಕ ನಾರಾಯಣಸ್ವಾಮಿ ಬಹಿರಂಗವಾಗಿ ಅಳಲು ತೋಡಿಕೊಂಡಿದ್ದರು.
ಇದಕ್ಕೆ ಟಾಂಗ್ ಕೊಟ್ಟಿರುವ ಆರ್ ಅಶೋಕ್ ದಲಿತ ಮುಖ್ಯಮಂತ್ರಿ" ಎಂಬುದು ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲ ಸಿದ್ದರಾಮಯ್ಯ ಅವರು ಉರುಳಿಸುವ ದಾಳ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?
ಮುಖ್ಯಮಂತ್ರಿ ಮಾಡುವುದು ದೂರದ ಮಾತು, ದಲಿತ ಶಾಸಕರ ಕೆಲಸಗಳೂ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಶ್ರೀ ಎಸ್.ಎನ್.ನಾರಾಯಣಸ್ವಾಮಿ ಅವರು ಬಹಿರಂಗವಾಗಿ ತಮ್ಮ ಅಳಲು ತೋಡಿಕೊಂಡಿರುವುದು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಧೋರಣೆಗೆ ಸ್ಪಷ್ಟ ನಿದರ್ಶನ.
ದಲಿತರು, ಹಿಂದುಳಿದವರ ಪರವಾಗಿದ್ದೇನೆ ಎಂದು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿರುವ ಸಿದ್ದರಾಮಯ್ಯನವರು ರಾಜ್ಯ ಕಂಡ ಅತ್ಯಂತ ದೊಡ್ಡ ದಲಿತ ವಿರೋಧಿ ಮುಖ್ಯಮಂತ್ರಿ ಎನ್ನುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ.