Webdunia - Bharat's app for daily news and videos

Install App

ಡಿಕೆ ಶಿವಕುಮಾರ್ ಅವರೇ ಕಂಬಿ ಇಲ್ಲದ ರೈಲು ಬಿಡೋದು ನಿಲ್ಲಿಸಿ: ಆರ್ ಅಶೋಕ್

ಕೃಷ್ಣವೇಣಿ ಕೆ
ಬುಧವಾರ, 20 ಮೇ 2026 (18:13 IST)
ಬೆಂಗಳೂರು: ಡಿಕೆ ಶಿವಕುಮಾರ್ ಅವರೇ ಕಂಬಿ ಇಲ್ಲದೇ ರೈಲು ಬಿಡೋದು ನಿಲ್ಲಿಸಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸಾಧನಾ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಸರ್ಕಾರದ ಸಾಧನೆ ಬಗ್ಗೆ ಮಾತನಾಡಿದ್ದರು. ಇದಕ್ಕೆ ಅಶೋಕ್ ಈ ರೀತಿ ತಿರುಗೇಟು ನೀಡಿದ್ದಾರೆ. ‘ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೆ, ಹಸಿ ಹಸಿ ಸುಳ್ಳು ಹೇಳಿ “ಕಂಬಿ ಇಲ್ಲದೆ ರೈಲು ಬಿಡುವ” ಕೆಲಸವನ್ನು ಇನ್ನಾದರೂ ನಿಲ್ಲಿಸಿ!

ಬಜೆಟ್‌ನಲ್ಲಿ ಘೋಷಿಸಿದ 400 ಹೊಸ ಬಸ್‌ಗಳಿಗೆ ಇನ್ನೂ ಸಮರ್ಪಕ ಅನುದಾನವೇ ಬಿಡುಗಡೆಯಾಗಿಲ್ಲ. ಇತ್ತ ರಾಜ್ಯದ ಹಲವೆಡೆ ಹಳೆಯ ಬಸ್‌ಗಳಿಗೆ ಸರಿಯಾದ ಸಮರ್ಪಕ  ನಿರ್ವಹಣೆ ಇಲ್ಲದೆ, ಬಸ್‌ಗಳು ಮಧ್ಯ ರಸ್ತೆಯಲ್ಲಿ ಹಾಳಾಗುವುದು, ಬೆಂಕಿಗಾಹುತಿಯಾಗುವುದು, ಪ್ರಯಾಣಿಕರ ಜೀವ ಭಯದಲ್ಲಿ ಸಂಚರಿಸುವುದು ಸಾಮಾನ್ಯ ದೃಶ್ಯವಾಗಿದೆ. ಜಾಹೀರಾತು ಮತ್ತು ಭಾಷಣಗಳಲ್ಲಿ ಅಭಿವೃದ್ಧಿ ತೋರಿಸುವ ಬದಲು, ಮೊದಲು ಜನರ ಸುರಕ್ಷತೆ ಮತ್ತು ಮೂಲಭೂತ ಸಾರಿಗೆ ವ್ಯವಸ್ಥೆಯನ್ನು ಸರಿಪಡಿಸಿ. ಜನರಿಗೆ ಬೇಕಿರುವುದು ನಿಮ್ಮ ಸುಳ್ಳಿನ ಕಂತೆ ಅಲ್ಲ…ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಡೋದೆಲ್ಲಾ ಮಾಡಿ ದಲಿತ ಕಾರ್ಡ್ ಬಳಸಿ ಪ್ರಕರಣ ಮುಚ್ಚಿ ಹಾಕಲು ನೋಡೋದು: ನಾಗೇಂದ್ರ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ಜಿಮ್ ಮಾಡುತ್ತಿದ್ದಾಗಲೇ ಕುಸಿದು ಅಲ್ಲೇ ಮರಣ: ವೈರಲ್ ಆಯ್ತು ವೈದ್ಯರೊಬ್ಬರ ಕೊನೆಯ ಕ್ಷಣ Video

ತರಗತಿಯಲ್ಲಿ ವಿದ್ಯಾರ್ಥಿಗೆ ಮನಬಂದಂತೆ ಹೊಡೆದ ಶಿಕ್ಷಕ: ಕ್ರೂರ ಕೃತ್ಯದ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ Video

ಬಸ್ ಹತ್ತುವಾಗ ಜಸ್ಟ್ ಮಿಸ್: ಬಸ್ ಕ್ಲೀನರ್ ಇಲ್ಲದೇ ಇದ್ದಿದ್ದರೆ ಈ ವೃದ್ಧನ ಕತೆ ಏನಾಗ್ತಿತ್ತೋ Video

ಡೆಲಿವರಿ ಬಾಯ್ ಹೆಂಡ್ತಿ ಆಸ್ಪತ್ರೆಯಲ್ಲಿದ್ದಾಳೆ, ಡೆಲಿವರಿ ಮುಗಿಸಿ ಬರ್ತೀನಿ ಎಂದರೂ ಕರಗಲಿಲ್ಲ ಟ್ರಾಫಿಕ್ ಪೊಲೀಸ್ ಮನಸ್ಸು Video

ಮುಂದಿನ ಸುದ್ದಿ
Show comments