Daily Horoscope
✕

ರಾಜ್ಯದಲ್ಲಿ ಗೂಂಡಾಗಿರಿ ಸರಕಾರ- ಆರ್.ಅಶೋಕ್

ಕೃಷ್ಣವೇಣಿ ಕೆ
ಮಂಗಳವಾರ, 11 ಆಗಸ್ಟ್ 2026 (15:36 IST)
ಬೆಂಗಳೂರು: ರಾಜ್ಯದಲ್ಲಿ ಗೂಂಡಾಗಿರಿ ಸರಕಾರ ಅಧಿಕಾರದಲ್ಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಆರೋಪಿಸಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಉಪಸ್ಥಿತಿಯಲ್ಲಿ ಅವರು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಗೂಂಡಾಗಿರಿ ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.

ನಾಳೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾ ಸಂದರ್ಶನ ಮಾಡಲಿದ್ದಾರೆ. ಅಲ್ಲಿ ನಮ್ಮ ಸಂಸದರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿದರು. ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು, ಜನಪ್ರತಿನಿಧಿಗಳು ಧರಣಿ ಮಾಡಲಿದ್ದಾರೆ. 13ರಂದು ಸದನ ಪ್ರಾರಂಭವಾಗಲಿದೆ. ಬಳಿಕ ಸ್ಪೀಕರ್ ಚುನಾವಣೆ ನಡೆಯಲಿದೆ. ಸೋಮವಾರದಿಂದ ಅಧಿವೇಶನ ಇದೆ. ವಿಧಾನಸಭೆ ಒಳಗಡೆಯೂ ನಾಗೇಂದ್ರರ ವಿಚಾರ ಪ್ರಸ್ತಾಪಿಸಿ ರಾಜೀನಾಮೆಗೆ ಆಗ್ರಹಿಸಲಿದ್ದೇವೆ ಎಂದು ತಿಳಿಸಿದರು.

ನಾಗೇಂದ್ರ ವಿರುದ್ಧ ಕೇಸ್ ಖುಲಾಸೆ ಆಗಿದೆಯೇ? ಹಾಗಿದ್ದರೆ ಮತ್ತೆ ಸಚಿವಸಂಪುಟಕ್ಕೆ ತೆಗೆದುಕೊಳ್ಳಬಹುದಿತ್ತು. ಈಶ್ವರಪ್ಪ ಅವರ ವಿಚಾರದಲ್ಲಿ ಕೈಕೈ ಮಿಲಾಯಿಸಿದ್ದರು. ಲಕ್ಷ್ಮಣ ಸವದಿ ವಿಚಾರದಲ್ಲೂ ವಿಡಿಯೋ ನೋಡಿ ಸಮಸ್ಯೆ ಆಗಿತ್ತು. ಅವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದೇವಾ? ನೀವು ಹೇಗೆ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದೀರಿ ಎಂದು ಕೇಳಿದರು. ನನಗೆ ಗೊತ್ತಿರುವ ಪ್ರಕಾರ ಮಿಸ್ಟರ್ ನಾಗೇಂದ್ರ ಪ್ರತಿದಿನವೂ ಕೋರ್ಟಲ್ಲೇ ಇರಬೇಕು. ಅವರ ವಿರುದ್ಧ ಹಲವಾರು ಕೇಸುಗಳು ಇವೆ ಎಂದು ಗಮನ ಸೆಳೆದರು.

 
ಅಸೆಂಬ್ಲಿಗೆ ಬರುವುದು ಯಾವಾಗ?

 
ಸಿಬಿಐ, ಇ.ಡಿ, ಸಿಐಡಿ, ಲೋಕಾಯುಕ್ತದ 31 ಕೇಸುಗಳಿವೆ ಎಂದು ವಿವರ ನೀಡಿದರು. ಚೆನ್ನೈನಲ್ಲೂ ಮೊಕದ್ದಮೆಗಳಿವೆ ಎಂದು ತಿಳಿಸಿದರು. ತಿಂಗಳಿಗೆ 31 ದಿನ ಇವೆ. 31 ದಿನ 31 ಕೇಸುಗಳಿವೆ ಎಂದು ವಿವರಿಸಿದರು. ಆ ಮನುಷ್ಯ ಅಸೆಂಬ್ಲಿಗೆ ಬರುವುದು ಯಾವಾಗ? ಖಾತೆ ನೋಡುವುದು ಯಾವಾಗ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿನವರಿಗೆ ಮಾನ ಮರ್ಯಾದೆ ಇದೆಯೇ? ಅವರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ. ಅವರು ಕೇಸುಗಳಿಗೆ ಓಡಾಡಲಿ ಎಂದು ವ್ಯಂಗ್ಯವಾಡಿದರು. ವಾಲ್ಮೀಕಿ ನಿಗಮದ 89 ಕೋಟಿಯಷ್ಟೇ ತಿಂದಿರುವುದೆಂದು ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಟೋಪಿ ಧರಿಸಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ಬಂದ ಸಚಿವರ ಸಹಾಯಕ: ಹೊರನಡೆಯಿರಿ ಎಂದು ಭಕ್ತರ ಆಕ್ರೋಶ Video

ಮಸೀದಿ ಚರ್ಚ್ ನಲ್ಲಿ ಓಂ ಬಿಡಿಸಲು ಬಿಡ್ತೀರಾ: ಅರ್ಕೇಶ್ವರ ದೇವಸ್ಥಾನದ ಗೋಡೆ ಮೇಲೆ ಮಸೀದಿ, ಶಿಲುಬೆ ಚಿತ್ರಕ್ಕೆ ಆಕ್ರೋಶ Video

ಪಾಸ್ಪೋರ್ಟ್ ಕಳೆದುಹೋಗಿದೆಯೇ, ಆತಂಕ ಪಡಬೇಡಿ, ತಕ್ಷಣವೇ ಈ ಪ್ರಮುಖ ಹಂತಗಳನ್ನು ಅನುಸರಿಸಿ

ಸಿಜೆಪಿ, ಕಾಂಗ್ರೆಸ್ ಎಸ್ಐಆರ್ ಪ್ರತಿಭಟನೆ ನಡುವೆ ಹೈರಾಣಾಗಿದ್ದು ವ್ಯಾಪಾರಿಗಳು: ದೆಹಲಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವೇನು

ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ರ‍್ಯಾಲಿ: ಎಸ್‌ಐಆರ್ ವಿವಾದದ ಪ್ರತಿಭಟನೆಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments