Webdunia - Bharat's app for daily news and videos

Install App

ಸದನ ಹಾಳು ಮಾಡ್ತಿರೋದು ಕಾಂಗ್ರೆಸ್, ನಾಳೆಯಿಂದ ಹೊಸ ರೀತಿ ಹೋರಾಟ ಶುರು ಮಾಡ್ತೀವಿ: ಆರ್ ಅಶೋಕ್

ಕೃಷ್ಣವೇಣಿ ಕೆ
ಗುರುವಾರ, 20 ಆಗಸ್ಟ್ 2026 (16:57 IST)
ಬೆಂಗಳೂರು: ಈ ಸರಕಾರವು ಒಬ್ಬ ಸಚಿವರಿಗಾಗಿ ಸದನ ನಡೆಸಲು ಸಮಸ್ಯೆ ತಂದೊಡ್ಡಿದೆ. ನಾವು ನೈಸ್, ಬಿಡದಿ, ಬರಗಾಲದ ಕುರಿತು ಚರ್ಚಿಸಬೇಕಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ತಿಳಿಸಿದ್ದಾರೆ. 
 
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಭ್ರಷ್ಟ, ದುಷ್ಟ ಸರಕಾರವನ್ನು ತೊಲಗಿಸುವ ವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು. ನಾಳೆ ವಾಲ್ಮೀಕಿ ಪ್ರತಿಮೆಯಿಂದ ನಾವು ಹೋರಾಟ ಆರಂಭಿಸುತ್ತೇವೆ ಎಂದು ಪ್ರಕಟಿಸಿದರು.
 
ದಲಿತರಿಗೆ ಸೇರಬೇಕಿದ್ದ 189 ಕೋಟಿ ಹಣವನ್ನು ನುಂಗಿ ಹಾಕಿದ್ದಾರೆ. ಕಳೆದ 4 ದಿನಗಳಿಂದ ನಾವು ದಲಿತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದ ತಿಳಿಸಿದರು. ಕೆಪಿಎಸ್ಸಿ, ರೇಷನ್ ಕಾರ್ಡ್ ಕುರಿತು ಚರ್ಚೆ ನಡೆಯಬೇಕಾಗಿದೆ. ಇಷ್ಟಿದ್ದರೂ ಹಠ ಹಿಡಿದು ಸದನವನ್ನು ಕಾಂಗ್ರೆಸ್ಸಿನವರು ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
 
ಮಂತ್ರಿ ಮಂಡಲ ಮಾಡಲು ದುಡ್ಡು ಪಡೆದಿದ್ದು, ಇವರು ಅವರನ್ನು ತೆಗೆಯುತ್ತಿಲ್ಲ. ಕಾಂಗ್ರೆಸ್ ಹಠ ಹಿಡಿದು ಚರ್ಚೆಗೆ ಅನುಮತಿ ಕೊಡುತ್ತಿಲ್ಲ ಎಂದು ದೂರಿದರು. ಬರಗಾಲ ಪ್ರದೇಶ ಎಂದು ಘೋಷಿಸಿಲ್ಲ. ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಈ ಶಾಪ ಕಾಂಗ್ರೆಸ್ಸಿಗೆ ತಟ್ಟಲಿದೆ ಎಂದು ನುಡಿದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಗೇಂದ್ರರನ್ನು ಬೇಕಿದ್ದರೆ ಹಣಕಾಸು ಸಚಿವರನ್ನಾಗಿಯೇ ಮಾಡಲಿ.. ಆದರೆ…: ಸಿಟಿ ರವಿ ಷರತ್ತು

ಇನ್ನೇನು ಹೊರಬರಬೇಕೆನ್ನುವಷ್ಟರಲ್ಲಿ ಕೆಳಗೆ ಚಲಿಸಿದ ಲಿಫ್ಟ್‌, ಹೊರಬರುತ್ತಿದ್ದ ಮಹಿಳೆ ಸಾವು, Video

ಆಕೆ ಮೋಸ ಮಾಡಿದ್ಳು, ಅದಕ್ಕೆ ಕೊಂದು ಹಾಕಿದೆ, ಸ್ಟೇಟಸ್ ಹಾಕಿದ ಆತ ಮಾಡಿದ ಮತ್ತೊಂದು ಹತ್ಯೆ

ರಾಜ್ಯದ ರೈಲು ನಿಲ್ದಾಣಗಳಲ್ಲಿ ಆಹಾರ ಪರಿಶೀಲನೆ ವೇಳೆ ಅವಧಿ ಮೀರಿದ ಹಾಲು, ಮೊಸರು, ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರು ಪತ್ತೆ, Video

ಯುವಕನ ಅತಿವೇಗದ ಕ್ರೇಜ್‌ಗೆ ಪ್ರಾಣನೇ ಹೋಯಿತು, ಭಯಾನಕ ವಿಡಿಯೋ

ಮುಂದಿನ ಸುದ್ದಿ
Show comments