Select Your Language

Notifications

webdunia
webdunia
webdunia
webdunia

ಕುಮಾರಸ್ವಾಮಿ ವಿರುದ್ದ ಆರ್.ಅಶೋಕ್ ವಾಗ್ದಾಳಿ

ಕುಮಾರಸ್ವಾಮಿ ವಿರುದ್ದ ಆರ್.ಅಶೋಕ್ ವಾಗ್ದಾಳಿ
ಚಿಕ್ಕಬಳ್ಳಾಪುರ , ಸೋಮವಾರ, 28 ನವೆಂಬರ್ 2022 (09:11 IST)
ಚಿಕ್ಕಬಳ್ಳಾಪುರ : ಬಸವರಾಜ ಬೊಮ್ಮಾಯಿ ಸರಳ ಮುಖ್ಯಮಂತ್ರಿ, ಹೆಬ್ಬೆಟ್ಟು ಸಿಎಂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
 
ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟು ಸಿಎಂ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎ.ಕೆ. ಗೊಲ್ಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅಶೋಕ್ ಅವರು,

ಬಿಜೆಪಿ ನ್ಯಾಷನಲ್ ಪಾರ್ಟಿ, ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ. ಎಚ್.ಡಿ.ದೇವೇಗೌಡ ಕುಟುಂಬದವರು ಹೇಳಿದ್ದರೆ ಮಾತ್ರ ಜೆಡಿಎಸ್ನಲ್ಲಿ ಹೆಬ್ಬೆಟ್ಟು ಒತ್ತೊದು. ಜೆಡಿಎಸ್ನಲ್ಲಿ ಅಂದು ಇಂದು ಮುಂದೆಯೂ ದೇವೇಗೌಡರದ್ದೇ ದರ್ಬಾರ್. ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಿತಿಗಳು ಪ್ರಕಟ