ಮುಸ್ಲಿಂ ಭವನಗಳಿಗೆ 67 ಕೋಟಿ, ಹಿಂದೂಗಳಿಗೆ ದುಡ್ಡಿಲ್ಲ: ಹಿಂದೂಗಳು ವೋಟ್ ಹಾಕಿಲ್ವಾ ಎಂದ ಅಶೋಕ್

Krishnaveni K
ಶುಕ್ರವಾರ, 21 ನವೆಂಬರ್ 2025 (11:04 IST)
ಬೆಂಗಳೂರು: ಮುಸ್ಲಿಂ ಭವನಗಳಿಗೆ ಸೌಲಭ್ಯ ಕಲ್ಪಿಸಲು 67 ಕೋಟಿ ರೂ. ಅನುದಾನ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್ ಅಶೋಕ್ ಹಿಂದೂಗಳು ನಿಮಗೆ ವೋಟ್ ಹಾಕಿಲ್ವಾ ಎಂದು ಪ್ರಶ್ನಿಸಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮುಸ್ಲಿಂ ಭವನಗಳಿಗೆ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ 67 ಕೋಟಿ ರೂ. ಅನುದಾನ ನೀಡಿದೆ. ಮಸೀದಿ, ವಕ್ಫ್ ಜಾಗದಲ್ಲಿ ಭವನ ನಿರ್ಮಾಣ ಮಾಡಲಿದೆ.  ಒಟ್ಟು 7 ಜಿಲ್ಲಾ ಕೇಂದ್ರಗಳಿಗೆ ಅನುದಾನ ನೀಡಲಾಗಿದೆ.

ಈ ವರದಿಯ ಬಗ್ಗೆ ಆರ್ ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರಿಗೆ ಬರ-ನೆರೆ ಪರಿಹಾರ ನೀಡಲು ಹಣವಿಲ್ಲ, ನೌಕರರ ಸಂಬಳಕ್ಕೆ ಹಣವಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖರೀದಿಗೆ ಹಣವಿಲ್ಲ, ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ, ಜನಕಲ್ಯಾಣ ಕಾರ್ಯಕ್ರಮಕ್ಕೆ ಹಣವಿಲ್ಲ, ಮಕ್ಕಳ ಬಿಸಿಯೂಟಕ್ಕೆ ಹಣವಿಲ್ಲ. ಆದರೆ ಮುಸ್ಲಿಂ ಭವನಗಳ ನಿರ್ಮಾಣಕ್ಕೆ ₹67 ಕೋಟಿ ಇದೆ. ಮುಸ್ಲಿಮರಿಗೆ ತುಷ್ಟೀಕರಣದ ಭಾಗ್ಯ, ಓಲೈಕೆ ಗ್ಯಾರೆಂಟಿ! ಹಿಂದೂಗಳಿಗೆ? ತೆರಿಗೆ, ತೊಂದರೆ, ಚೊಂಬು ಗ್ಯಾರೆಂಟಿ!

ತುಷ್ಟೀಕರಣ, ಓಲೈಕೆಗೂ ಒಂದು ಇತಿಮಿತಿ ಬೇಡವೇ ಸಿಎಂ ಸಿದ್ದರಾಮಯ್ಯನವರೇ? ಹಿಂದೂಗಳು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಲ್ಲವಾ? ಅಥವಾ ರಾಹುಲ್ ಗಾಂಧಿ ಅವಾಗ ಸಂವಿಧಾನ ಪುಸ್ತಕದಲ್ಲಿ ಹಿಂದೂಗಳು ಎರಡನೇ ದರ್ಜೆ ಪ್ರಜೆಗಳಾ?’ ಎಂದು ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ದರೋಡೆ ಪ್ರಕರಣ: ಪೊಲೀಸರ ಕಣ್ತಪ್ಪಿಸಲು ಕಳ್ಳರ ಖತರ್ನಾಕ್ ಪ್ಲ್ಯಾನ್ ಬಹಿರಂಗ

ಬಾಹ್ಯಾಕಾಶದಿಂದ ಬರೋದು ಸುಲಭ: ಪ್ರಿಯಾಂಕ್ ಖರ್ಗೆ ಎದುರದಲ್ಲೇ ಬೆಂಗಳೂರು ರಸ್ತೆ ಕಿಚಾಯಸಿದ ಶುಭಾಂಶು ಶುಕ್ಲ

ಡಿಕೆ ಶಿವಕುಮಾರ್ ಬೆಂಬಲಿಗರನ್ನು ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್

Karnataka Weather: ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಮುಂದಿನ ಸುದ್ದಿ
Show comments