Webdunia - Bharat's app for daily news and videos

Install App

ನಾಡ ಹಬ್ಬಕ್ಕೆ ಬಾನು ಮುಷ್ತಾಕ್ ಚಾಲನೆ ವಿವಾದಕ್ಕೆ ಐದು ಪ್ರಶ್ನೆ ಹಾಕಿದ ಆರ್ ಅಶೋಕ್

Krishnaveni K
ಶುಕ್ರವಾರ, 29 ಆಗಸ್ಟ್ 2025 (17:36 IST)
ಬೆಂಗಳೂರು: ನಾಡ ಹಬ್ಬಕ್ಕೆ ಬಾನು ಮುಷ್ತಾಕ್ ಚಾಲನೆ ನೀಡುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರಕ್ಕೆ ಮತ್ತು ಸಿಎಂ ಸಿದ್ದರಾಮಯ್ಯಗೆ ಐದು ಪ್ರಶ್ನೆ ಹಾಕಿದ್ದಾರೆ.

ಮುಸ್ಲಿಂ ಧರ್ಮೀಯರಾಗಿರುವ ಬಾನು ಮುಷ್ತಾಕ್ ರಿಂದ ನಾಡದೇವತೆ, ಹಿಂದೂಗಳ ದೇವತೆ ಚಾಮುಂಡೇಶ್ವರಿ ಹಬ್ಬಕ್ಕೆ ಚಾಲನೆ ನೀಡುತ್ತಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಆರ್ ಅಶೋಕ್ ಟ್ವೀಟ್ ಮೂಲಕ ಐದು ಪ್ರಶ್ನೆ ಹಾಕಿದ್ದಾರೆ.

ನಾಡಹಬ್ಬ ದಸರಾ ಸಂಭ್ರಮಕ್ಕೆ ವಿವಾದದ ಮಸಿ ಬಳಿದಿರುವ ಸಿಎಂ ಸಿದ್ದರಾಮಯ್ಯ  ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನನ್ನ 5 ಪ್ರಶ್ನೆಗಳು:

1.) ಇಷ್ಟಕ್ಕೂ ಬಾನು ಮುಷ್ತಾಕ್ ಅವರ ಕೈಯಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ಮಾಡಿಸಬೇಕು ಎನ್ನುವ ಐಡಿಯಾ ಯಾರದು? ಇದು ಮುಖ್ಯಮಂತ್ರಿಗಳ ಐಡಿಯಾನೊ, ಅಥವಾ ಅವರ ಸಂಪುಟ ಸಹೋದ್ಯೋಗಿಗಳ ಐಡಿಯಾನೊ? ಅಥವಾ ಇದು ಕೂಡ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಕುಮ್ಮಕ್ಕು ಕೊಟ್ಟಿದ್ದ so-called ಬುದ್ಧಿಜೀವಿ, ಎಡಪಂಥೀಯ ನಗರ ನಕ್ಸಲರ ಐಡಿಯಾನೊ?

2.) ಬಾನು ಮುಷ್ತಾಕ್ ಅವರನ್ನು ಮುಂದಿನ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಅದು ಅವರಿಗೂ ಗೌರವ ತರುತ್ತಿತ್ತು. ಆದರೆ ಬಾನು ಮುಷ್ತಾಕ್ ಅವರಿಗೂ ಹಿಂದೂಗಳ ಆರಾಧ್ಯ ದೇವತೆ ತಾಯಿ ದುರ್ಗೆಯ ನವರೂಪಗಳನ್ನು ಪೂಜಿಸಿ ಆರಾಧಿಸುವ ದಸರಾ, ನವರಾತ್ರಿಗೂ ಏನು ಸಂಬಂಧ?

3.) ನಮ್ಮ ತಾಯ್ನೆಲಕ್ಕೆ, ನಮ್ಮ ಜೀವನಾಡಿಯಾಗಿರುವ ನದಿಗಳಿಗೆ ಹೆಣ್ಣಿನ ಹೆಸರಿಟ್ಟು ತಾಯಿ ಸ್ಥಾನದಲ್ಲಿ ಕೂರಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಅದಕ್ಕಾಗಿಯೇ ರಾಷ್ಟಕವಿ ಕುವೆಂಪು ಅವರು "ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಎಂದು ನಮ್ಮ ನಾಡಗೀತೆಯಲ್ಲಿ ಹೇಳಿರುವುದು. ಅದಕ್ಕಾಗಿಯೇ ನಾವು "ಕನ್ನಡ ನಾಡಿನ ಜೀವ ನದಿ ಈ ಕಾವೇರಿ" ಎಂದು ಹಾಡುವುದು.

ಆದರೆ, "ಕನ್ನಡಾಂಬೆಯನ್ನು ಭುವನೇಶ್ವರಿಯ ಸ್ಥಾನದಲ್ಲಿ ಕೂರಿಸಿ ಕನ್ನಡಮ್ಮನನ್ನು ದೌರ್ಜನ್ಯ ಮಾಡುತ್ತಿದ್ದೀರಿ" ಎನ್ನುವ ಅಭಿಪ್ರಾಯ, ಮನಸ್ಥಿತಿ ಇರುವ ವ್ಯಕ್ತಿಯೊಬ್ಬರಿಂದ ದಸರಾ ಉದ್ಘಾಟನೆ ಮಾಡಿಸಿದರೆ, ಅವರು ನಾಳೆ ತಾಯಿ ಚಾಮುಂಡೇಶ್ವರಿಯನ್ನು ಆನೆಯ ಅಂಬಾರಿ ಮೇಲೆ ಕೂರಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿ ಕ್ಯಾತೆ ತೆಗೆಯುವುದಿಲ್ಲ ಎನ್ನುವದಕ್ಕೆ ಏನು ಗ್ಯಾರೆಂಟಿ?

4.) ನಮ್ಮ ನೆಲ, ಜಲ, ಸಂಸ್ಕೃತಿಯ ಬಗ್ಗೆ ಗೌರವ, ಸಂವೇದನೆಯೇ ಇಲ್ಲದ ಒಬ್ಬ ವ್ಯಕ್ತಿಯಿಂದ ನಾಡಹಬ್ಬ ಉದ್ಘಾಟನೆ ಮಾಡಿಸುವುದು ಎಷ್ಟು ಸರಿ? ಇದು ತಾಯಿ ಚಾಮುಂಡೇಶ್ವರಿಯ ಅಸಂಖ್ಯಾತ ಆಸ್ತಿಕ ಭಕ್ತರಿಗೆ, ಚಾಮುಂಡಿ ಬೆಟ್ಟವನ್ನು ಪವಿತ್ರ ಶಕ್ತಿಪೀಠ ಎಂದು ನಂಬಿರುವ ಹಿಂದುಗಳಿಗೆ ಮಾಡುವ ಅಪಮಾನ ಅಲ್ಲವೇ?

5.) ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದರೆ ಅದು ಸಹಜವಾಗಿ ವಿವಾದವಾಗುತ್ತದೆ, ಅದಕ್ಕೆ ವಿರೋಧ ವ್ಯಕ್ತವಾಗುತ್ತದೆ ಎಂಬ ವಿಷಯ ಸರ್ಕಾರಕ್ಕೆ ತಿಳಿಯದೆ ಏನೂ ಇಲ್ಲ. ಆದರೂ ಹಠಕ್ಕೆ ಬಿದ್ದವರಂತೆ, ಉದ್ದೇಶಪೂರ್ವಕವಾಗಿ ವಿವಾದಕ್ಕೆ ಎಡೆಮಾಡಿಕೊಡುವ ವ್ಯಕ್ತಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಇದರಿಂದ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ನಾಡಿನ ಜನತೆಗೆ, ಅದರಲ್ಲೂ ವಿಶೇಷವಾಗಿ ಹಿಂದೂಗಳಿಗೆ ಏನು ಸಂದೇಶ ಕೊಡಲು ಹೊರಟಿದೆ? ಧರ್ಮಸ್ಥಳ, ಚಾಮುಂಡಿ ಬೆಟ್ಟ ಇವೆಲ್ಲವೂ ಒಂದಲ್ಲ ಒಂದು ದಿನ ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕಾರಣದ ಮುಂದೆ ತಲೆ ಬಾಗಲೇಬೇಕು ಬೇಕು ಎನ್ನುವ ಎಚ್ಚರಿಕೆಯೋ? ಅಥವಾ ನಾವು ಎಷ್ಟೇ ಬಹಿರಂಗವಾಗಿ, ಹಿಂದೂಗಳನ್ನು ಅಣಕಿಸುವಂತೆ ತುಷ್ಟೀಕರಣ ರಾಜಕಾರಣ ಮಾಡಿದರೂ, ವೋಟ್ ಬ್ಯಾಂಕ್ ರಾಜಕಾರಣದಿಂದ ಗೆದ್ದು ಬರುತ್ತೇವೆ ಎನ್ನುವ ಅಹಂಕಾರದ ಧೋರಣೆಯೋ? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಭಯ ಹುಟ್ಟಿಸಿದ ವಿರಳ ಮಿದುಳು ಸೋಂಕಿಗೆ ಮತ್ತೊಂದು ಬಲಿ

ದೇಶದ ಮೇಲೆ ಹಿಂದೂಗಳಷ್ಟೇ ಮುಸ್ಲಿಮರಿಗೂ ಹಕ್ಕಿದೆ ಎಂದ ಸಂತೋಷ್ ಲಾಡ್: ಕಿಚಾಯಿಸಿದ ಆರ್ ಅಶೋಕ್

ಬೆಂಗಳೂರು 10 ನೇ ತರಗತಿ ವಿದ್ಯಾರ್ಥಿನಿಯನ್ನು ವಿವಸ್ತ್ರವಾಗಿಸಿ ಹಲ್ಲೆ

ಮೋದಿ ನನ್ನ ಫ್ರೆಂಡು ಎಂದು ಅತ್ತ ಕಡೆಯಿಂದ ಡಬಲ್ ಸುಂಕ ಹೇರಲು ಕುತಂತ್ರ ಮಾಡಿದ್ರಾ ಟ್ರಂಪ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments