ಮುಂಬೈ: ಮಹಾರಾಷ್ಟ್ರದಲ್ಲಿ ಜನತೆ ನೀಡಿರುವ ಜನಾದೇಶವನ್ನು ಒಪ್ಪಿಕೊಳ್ಳದ ಕಾಂಗ್ರೆಸ್ ಪಕ್ಷ ಇವಿಎಂ ಮತ ಯಂತ್ರಗಳನ್ನು ದೂಷಣೆ ಮಾಡುತ್ತಿದೆ. ಆದರೆ ಇಲ್ಲಿ ಕರ್ನಾಟಕದ ಮೂರು ಉಪಚುನಾವಣೆಗಳ ಗೆಲುವು 2028ಕ್ಕೆ ದಿಕ್ಸೂಚಿ ಎಂದು ಹೇಳುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದರು.
ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದು, ಇವಿಎಂ ಇರುವವರೆಗೂ ಬಿಜೆಪಿಗೆ ಗೆಲುವು ಖಚಿತ ಎಂದು ಗೃಹಮಂತ್ರಿ ಪರಮೇಶ್ವರ್ ಹೇಳಿಕೆಗೆ ಅವರು ತಿರುಗೇಟು ನೀಡಿದರು.
ಈ ವಿಚಾರವಾಗಿ ಆರ್ ಅಶೋಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದರು. ಸೋತರೆ ಇವಿಎಂ ದೋಷ, ಗೆದ್ದರೆ ಅಹಂ ಎನ್ನುವ ರೋಶವೇಷ!
ಮಹಾರಾಷ್ಟ್ರದಲ್ಲಿ ಜನತೆ ನೀಡಿರುವ ಜನಾದೇಶವನ್ನು ಒಪ್ಪಿಕೊಳ್ಳದ ಕಾಂಗ್ರೆಸ್ ಪಕ್ಷ ಇವಿಎಂ ಮತ ಯಂತ್ರಗಳನ್ನು ದೂಷಣೆ ಮಾಡುತ್ತಿದೆ. ಆದರೆ ಇಲ್ಲಿ ಕರ್ನಾಟಕದ ಮೂರು ಉಪಚುನಾವಣೆಗಳ ಗೆಲುವು 2028ಕ್ಕೆ ದಿಕ್ಸೂಚಿ ಎಂದು ಹೇಳುತ್ತಿದೆ.
ಸೋತರೆ ಇವಿಎಂ ದೋಷ, ಗೆದ್ದರೆ ನಮ್ಮಿಂದಲೇ ಎನ್ನುವ ರೋಷವೇಶ. ಇದು ಕಾಂಗ್ರೆಸ್ ಪಕ್ಷದ ಲಜ್ಜೆಗೆಟ್ಟ ಎಡಬಿಡಂಗಿತನ.
ದೇಶದೆಲ್ಲೆಡೆ ಜನಮನ್ನಣೆ ಕಳೆದುಕೊಂಡು ಅಡ್ರೆಸ್ ಇಲ್ಲದಂತಾಗಿರುವ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಈ ಮುಳುಗುತ್ತಿರುವ ದೋಣಿ ಕರ್ನಾಟಕದಲ್ಲೂ ಕಡೇ ದಿನಗಳನ್ನು ಎಣಿಸುತ್ತಿದ್ದು, ಶೀಘ್ರದಲ್ಲೇ ಪತನವಾಗಲಿದೆ.<>