Publish Date: Thu, 28 Dec 2017 (08:34 IST)
Updated Date: Thu, 28 Dec 2017 (08:44 IST)
ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಶಾಸಕ ವಸಂತ ಬಂಗೇರಾ ವ್ಯಂಗವಾಡಿದ್ದಾರೆ.
ಭೂಪಸಂದ್ರ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಲ್ಲ. ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ಪುಟ್ಟಸ್ವಾಮಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.
ಭೂಪಸಂದ್ರದ ಸರ್ವೇ ನಂಬರ್ 20,21 ರ ಡಿನೋಟಿಫಿಕೇಶನ್ ಅಕ್ರಮ, ನಾನು ಎರಡು ಪತ್ರಗಳನ್ನ ಬರೆದಿದ್ದಕ್ಕೆ ಡಿನೋಟಿಫಿಕೇಶನ್ ಮಾಡಿದ್ದಾರೆ ಎನ್ನುವುದು ಸುಳ್ಳು. ಭೂ ಮಾಲೀಕರು ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿ ಗೆದ್ದುಕೊಂಡಿದ್ದಾರೆ ಎಂದರು.
ಕೋರ್ಟ್ ಆದೇಶ ಇರುವುದರಿಂದ ಸಕ್ರಮ ಮಾಡುವಂತೆ ಪತ್ರ ನೀಡಿದ್ದೆ. ಪರಿಶೀಲನೆ ಬಳಿಕ ಮುಖ್ಯಮಂತ್ರಿ ಬಿಡಿಎ ಆಯುಕ್ತರಿಗೆ ಪತ್ರ ಬರೆದಿದ್ದಾರೆ ಅಷ್ಟೇ. ಬಳಿಕ ಸೈಟ್‌ಗಳನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲವೆಂದು ಬಿಡಿಎ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದರು. 2014ರಲ್ಲೇ ಪತ್ರ ಬರೆದು, ಪ್ರಕರಣ ಮುಗಿದ ಅಧ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.