Select Your Language

Notifications

webdunia
webdunia
webdunia
webdunia

ಅಜ್ಞಾತ ಸ್ಥಳದಲ್ಲಿ ಪುಟಿನ್ ಕುಟುಂಬ! ನ್ಯೂಕ್ಲಿಯರ್ ದಾಳಿಗೆ ಸಿದ್ಧತೆನಾ...?

ಅಜ್ಞಾತ ಸ್ಥಳದಲ್ಲಿ ಪುಟಿನ್ ಕುಟುಂಬ! ನ್ಯೂಕ್ಲಿಯರ್ ದಾಳಿಗೆ ಸಿದ್ಧತೆನಾ...?
bangalore , ಬುಧವಾರ, 2 ಮಾರ್ಚ್ 2022 (20:56 IST)
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿಗೆ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡ್ಕೊಳ್ತಿದ್ದಾರಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಕಳೆದ ಕೆಲ ದಿನಗಳಿಂದ ವ್ಲಾಡಿಮಿರ್ ಪುಟಿನ್ ಕುಟುಂಬ ಸಾರ್ವಜನಿಕವಾಗಿ ಕಾಣಿಸಿಕೊಳ್ತಿಲ್ಲ.
ಅವರನ್ನು ಸೈಬೀರಿಯಾದ ಅಂಡರ್ ಗ್ರೌಂಡ್ ಸಿಟಿಯಲ್ಲಿ ಇರಿಸಿದ್ದಾರೆ ಅಂತ 61 ವರ್ಷದ ರಷ್ಯನ್ ಪ್ರೊಫೆಸರ್ ವಾಲೆರಿ ಸೊಲೋವೇ ಹೇಳಿಕೊಂಡಿದ್ದಾರೆ. ನ್ಯೂಕ್ಲಿಯರ್ ವಾರ್ ನಡೆದ್ರೆ ಅವರಿಗೆ ಏನೂ ಆಗಬಾರದು ಅನ್ನೋ ಕಾರಣಕ್ಕೆ ಅಲ್ಟೈ ಬೆಟ್ಟಗಳ ನಡುವೆ ಇರೋ ಲಕ್ಷುರಿ ಹೈಟೆಕ್ ಬಂಕರ್​ನಲ್ಲಿ ಕುಟುಂಬವನ್ನು ಇರಿಸಿದ್ದಾರೆ. ಇದು ಹೆಸರಿಗೆ ಮಾತ್ರ ಬಂಕರ್. ಆದ್ರೆ ಅಸಲಿಗೆ ಇದೊಂದು ಅಂಡರ್​ಗ್ರೌಂಡ್ ಸಿಟಿ.. ಇಲ್ಲಿ ಅತ್ಯಾಧುನಿಕ ವಿಜ್ಞಾನ, ತಂತ್ರಜ್ಞಾನ ಇದೆ.. ಈ ಪ್ರದೇಶ ಚೀನಾ, ಮಂಗೋಲಿಯಾ ಮತ್ತು ಕಜಕ್​ಸ್ತಾನದ ಬಾರ್ಡರ್​ನಲ್ಲಿದೆ ಅಂತ ಕೂಡ ಹೇಳಿಕೊಂಡಿದ್ದಾರೆ.. ಅಂದಹಾಗೆ ವಾಲೆರಿ ಸೊಲೋವೇ ಈ ಹಿಂದೆ ಮಾಸ್ಕೋ ಸ್ಟೇಟ್ ಇನ್​ಸ್ಟಿಟ್ಯೂಟ್ ಆಫ್ ಇಂಟರ್​​ನ್ಯಾಷನಲ್​​​​ ರಿಲೇಷನ್ಸ್​ನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿದ್ರು. ಈ ಹಿಂದೆಯೂ ಇವರು ಪುಟಿನ್​​ಗೆ ಸಂಬಂಧಿಸಿದಂತೆ ವಿವಾದಿತ ಹೇಳಿಕೆ ಕೊಟ್ಟು ವಿಚಾರಣೆಗೆ ಒಳಪಟ್ಟಿದ್ರು. ಈ ಹಿಂದೆ ಇವರು ವ್ಲಾಡಿಮಿರ್ ಪುಟಿನ್ ಏನೋ ಸೀಕ್ರೆಟ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ರೆ ಅದನ್ನು ಜನರಿಂದ ಮುಚ್ಚಿಟ್ಟಿದ್ದಾರೆ. ಇದೇ ವಿಚಾರವಾಗಿ ಇತ್ತೀಚೆಗೆ ರಕ್ಷಣಾ ಸಚಿವ ಸೆರ್ಜೀ ಶೊಯ್ಗು ಜೊತೆ ಭೂತ ಪ್ರೇತ ಬಿಡಿಸೋ ಆಚರಣೆಯೊಂದ್ರಲ್ಲಿ ಭಾಗಿಯಾಗಿದ್ರು ಅಂತ ಆರೋಪ ಮಾಡಿದ್ರು. ಕಳೆದ ವಾರವಷ್ಟೇ ಸೊಲೊವೇಯನ್ನು ಪುಟಿನ್ ಮಾನಸಿಕ ಆರೋಗ್ಯದ ಬಗ್ಗೆ ಮಾಡಿದ್ದ ಆರೋಪ ಸಂಬಂಧ ಅರೆಸ್ಟ್ ಮಾಡಿ ಸತತ 7 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಮನೆಯಲ್ಲಿ ಶೋಧಕಾರ್ಯ ನಡೆಸಿದ್ದ ಅಧಿಕಾರಿಗಳು, ಹಲವು ವಸ್ತುಗಳನ್ನು ಸೀಜ್ ಕೂಡ ಮಾಡಿದ್ರು. ನಂತರ ಸೊಲೊವೇ ಬಿಡುಗಡೆಯಾದ್ರೂ ಕೇಸ್ ಕ್ಲೋಸ್ ಆಗಿರಲಿಲ್ಲ. ಇನ್ನು ಪುಟಿನ್ ಫ್ಯಾಮಿಲಿ ಯಾರಂತ ಸೊಲೊವೇ ಮಾಹಿತಿ ನೀಡಿಲ್ಲ.. ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದ 38 ವರ್ಷದ ಜಿಮ್ನಾಸ್ಟ್​ ಅಲಿನಾ ಕಬಾಏವಾ ಪುಟಿನ್ ಸೀಕ್ರೆಟ್ ಹೆಂಡ್ತಿ ಅಂತ ಕಳೆದ ವರ್ಷ ಇದೇ ಸೊಲೋವೇ ಆರೋಪ ಮಾಡಿದ್ರು. ಈಕೆಯನ್ನು ಹೊರತುಪಡಿಸಿದ್ರೆ ಪುಟಿನ್​​ಗೆ 36 ವರ್ಷದ ಮರಿಯಾ ವೊರೊಂಟ್ಸೋವಾ, 35 ವರ್ಷದ 35 ವರ್ಷದ ಕಟೇರಿನಾ ಅನ್ನೋ ಹೆಣ್ಮಕ್ಕಳು ಕೂಡ ಇದ್ದಾರೆ. ಇದಲ್ಲದೆ ಇನ್ನು ಕೂಡ ಹಲವು ಸಂಬಂಧ ಮತ್ತು ಮಕ್ಕಳ ಬಗ್ಗೆ ರಷ್ಯಾದಲ್ಲಿ ಚರ್ಚೆಯಾಗುತ್ತೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೀವ್‌ ನಲ್ಲಿದ್ದ ಎಲ್ಲಾ ಭಾರತೀಯರು ತಾಯ್ನಾಡಿಗೆ ವಾಪಾಸ್