Publish Date: Mon, 26 Jun 2017 (18:47 IST)
Updated Date: Mon, 26 Jun 2017 (18:50 IST)
ಮದುವೆಯಾದ ಆರು ತಿಂಗಳುಗಳ ನಂತರ ವಧುವಿಗೆ ಹುಚ್ಚು ಹಿಡಿಯುತ್ತದೆ ಎಂದು ಭವಿಷ್ಯ ಹೇಳಿ ಮದುವೆ ಮುರಿದ ಕಳ್ಳಸ್ವಾಮಿಗೆ ಸಾರ್ವಜನಿಕರು ಧರ್ಮದೇಟು ಬಿದ್ದಿದೆ.
ರೂಪಿನಾಳದ 30 ವರ್ಷ ವಯಸ್ಸಿನ ಕಳ್ಳಸ್ವಾಮಿ ಅಪ್ಪಿಸಾಬಖಿರಾಯಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರೂಪಿನಾಳ ಗ್ರಾಮದಲ್ಲಿ ಎರಡು ಕುಟುಂಬಗಳ ಮಧ್ಯೆ ವಿವಾಹ ನಿಶ್ಚಿಯವಾಗಿತ್ತು. ಆದರೆ, ಮದುವೆಯಾದ ಆರು ತಿಂಗಳುಗಳ ಬಳಿಕ ಮದುಮಗಳಿಗೆ ಹುಚ್ಚು ಹಿಡಿಯುತ್ತದೆ ಎಂದು ಭವಿಷ್ಯ ನುಡಿದು ವಿವಾಹ ರದ್ದುಗೊಳ್ಳಲು ಕಾರಣವಾಗಿದ್ದ.
ಮಾಹಿತಿ ತಿಳಿದ ಮದುಮಗಳ ಕಡೆಯವರು ಕಳ್ಳಸ್ವಾಮಿ ಅಪ್ಪಿಸಾಬಖಿರಾಯಿನನ್ನು ಹಿಡಿದು ಸಾರ್ವಜನಿಕರೊಂದಿಗೆ ಸೇರಿ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.