Select Your Language

Notifications

webdunia
webdunia
webdunia
webdunia

ದ್ವಿತೀಯ ಪಿಯು ಫಲಿತಾಂಶ ಉಡುಪಿಗೆ ಪ್ರಥಮ ಸ್ಥಾನ ಬೀದರ್‌ಗೆ ಕೊನೆ ಸ್ಥಾನ

ದ್ವಿತೀಯ ಪಿಯು ಫಲಿತಾಂಶ ಉಡುಪಿಗೆ ಪ್ರಥಮ ಸ್ಥಾನ ಬೀದರ್‌ಗೆ ಕೊನೆ ಸ್ಥಾನ
ಬೆಂಗಳೂರು , ಗುರುವಾರ, 11 ಮೇ 2017 (15:21 IST)
ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಉಡುಪಿಗೆ ಪ್ರಥಮ ಸ್ಥಾನ ದೊರೆತಿದ್ದರೆ ಬೀದರ್‌ಗೆ ಕೊನೆ ಸ್ಥಾನ ಲಭಿಸಿದೆ. ಉಡುಪಿ ಜಿಲ್ಲೆಯಲ್ಲಿ ಶೇ.90.01 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
 
ದಕ್ಷಿಣ ಕನ್ನಡ ಜಿಲ್ಲೆ ಪಡೆದಿದ್ದರೆ ಎರಡನೇ ಸ್ಥಾನ ಉತ್ತರ ಕನ್ನಡ ಜಿಲ್ಲೆ ತೃತಿಯ ಸ್ಥಾನ  ಪಡೆದಿದೆ. ಎಂದಿನಂತೆ ಫಲಿತಾಂಶದಲ್ಲಿ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ.
 
ಪಿಯು ಪರೀಕ್ಷೆಯಲ್ಲಿ ಶೇ.44.74 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಶೇ.60.28 ರಷ್ಟು ಬಾಲಕೀಯರು ಉತ್ತೀರ್ಣರಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.52.88 ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು  ಉತ್ತೀರ್ಣರಾಗಿದ್ದಾರೆ.
 
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪಿಯು ಪರೀಕ್ಷಾ ಫಲಿತಾಂಶದಲ್ಲಿ ಶೇ.5 ರಷ್ಟು ಕುಸಿತವಾಗಿದೆ ಎಂದು ಶಿಕ್ಷಣ ಖಾತೆ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರಕಾರ ಮರಳು ಮಾಫಿಯಾದ ಹಿಡಿತದಲ್ಲಿದೆ: ಈಶ್ವರಪ್ಪ ಆರೋಪ