Select Your Language

Notifications

webdunia
webdunia
webdunia
webdunia

ಮಹಾರಾಣಿ ಕಾಲೇಜು ಹೆಣ್ಮಕ್ಕಳನ್ನ ಕಾಡಿದ್ದ ಸೈಕೋ ಬಂಧನ

psycho krishna
ಬೆಂಗಳೂರು , ಬುಧವಾರ, 22 ಮಾರ್ಚ್ 2017 (09:20 IST)
ರಾತ್ರಿ ಆಯಿತೆಂದರೆ ಹಾಸ್ಟೆಲ್`ಗೆ ನುಗ್ಗಿ ಹೆಣ್ಮಕ್ಕಳ ಒಳ ಉಡುಪುಗಳನ್ನ ಕದ್ದು, ಅವುಗಳನ್ನೇ ಹಾಕಿಕೊಂಡು ಮಹಾರಾಣಿ ಕಾಲೇಜು ಹೆಣ್ಮಕ್ಕಳಿಗೆ ಕಾಟ ಕೊಡುತ್ತಿದ್ದ ಅಬುತಾಲೀಮ್ ಎಂಬಾತನನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ರೇಸ್ ಕೋರ್ಸ್`ನಲ್ಲಿ ಕುದುರೆಗಳಿಗೆ ಮಾಲೀಶ್ ಮಾಡುತ್ತಿದ್ದ ಈ ಸೈಕೋ ಗೋಡೆ ಹಾರಿ ರಾತ್ರಿ ಮಹಾರಾಣಿ ಕಾಲೇಜು ಹಾಸ್ಟೆಲ್`ಗೆ ನುಗ್ಗುತ್ತಿದ್ದ. ಬಳಿಕ ಅಲ್ಲಿನ ವಿದ್ಯಾರ್ಥಿನಿಯರನ್ನ ಕಾಡುತ್ತಿದ್ದ. ಈತನ ಕಾಮಚೇಷ್ಟೆ ಸಿಸಿಟಿವಿಯಲ್ಲೂ ಸೆರೆಯಾಗಿತ್ತು.

ಸೈಕೋ ಕೃಷ್ಣನ ಕಾಟದಿಂದ ಆತಂಕಗೊಂಡಿದ್ದ ವಿದ್ಯಾರ್ಥಿನಿಯರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಲವು ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಕಾಟ ಕೊಡುತ್ತಿದ್ದ ಸೈಕೋ ಕೃಷ್ಣ ಯಾರು ಕೈಗೂ ಸಿಕ್ಕಿರಲಿಲ್ಲ. ಈಗ ಕಂಬಿ ಹಿಂದೆ ಸೇರಿದ್ದಾನೆ.

ಬಿಹಾರ ಮೂಲದ ಈತ ಕಳೆದ ಕೆಲ ವರ್ಷಗಳಿಂದ ರೇಸ್ ಕೋರ್ಸ್`ನಲ್ಲಿ ಕುದುರೆಗೆಳಿಗೆ ಮಾಲೀಶ್ ಮಾಡುತ್ತಿದ್ದ. ಮದುವೆಯಾಗಿ ಮಕ್ಕಳಿದ್ದರೂ ಅಬುತಾಲೀಮ್ ಈ ಕುಖರತ್ಯ ಎಸಗುತ್ತಿದ್ದ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಷೇಪಾರ್ಹ ಹೇಳಿಕೆ: ಕಮಲ್ ಹಾಸನ್ ವಿರುದ್ಧ ಮೊಕದ್ದಮೆ ದಾಖಲು