Select Your Language

Notifications

webdunia
webdunia
webdunia
webdunia

ಎನ್ ಕೌಂಟರಲ್ಲಿ ಗಾಯಗೊಂಡ ಪಿಎಸ್ಐಗೆ ಸ್ಪರ್ಶದಲ್ಲಿ ಚಿಕಿತ್ಸೆ: ನೋಡಲು ಬಾರದ ಅಧಿಕಾರಿಗಳು

ಎನ್ ಕೌಂಟರಲ್ಲಿ ಗಾಯಗೊಂಡ ಪಿಎಸ್ಐಗೆ ಸ್ಪರ್ಶದಲ್ಲಿ ಚಿಕಿತ್ಸೆ: ನೋಡಲು ಬಾರದ ಅಧಿಕಾರಿಗಳು
ಬೆಂಗಳೂರು , ಸೋಮವಾರ, 6 ನವೆಂಬರ್ 2017 (21:06 IST)
ಬೆಂಗಳೂರು: ವಿಜಯಪುರ ಜಿಲ್ಲೆಯ ಕೊಂಕಣಗಾಂವ್ ಬಳಿ ಭೀಮಾತೀರದ ಹಂತಕನ ಎನ್ ಕೌಂಟರ್ ಪ್ರಕರಣದಲ್ಲಿ ಗುಂಡೇಟಿಗೆ ಒಳಗಾಗಿದ್ದ ಚಡಚಣ ಠಾಣೆ ಪಿಎಸ್ಐ ಗೋಪಾಲ್ ಹಳ್ಳೂರ್ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸ್ಪರ್ಶ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ 2 ಗುಂಡು ತೆಗೆದಿದ್ದು, ಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ 15 ದಿನ ಸ್ಪರ್ಶ ಆಸ್ಪತ್ರೆಯಲ್ಲಿ ಪಿಎಸ್ಐ ಚಿಕಿತ್ಸೆ ಪಡೆಯಲಿದ್ದು, ಮುಂದಿನ ನಾಲ್ಕು ತಿಂಗಳು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಯಶವಂತಪುರದಲ್ಲಿರುವ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಲಿದೆ.

ಆದರೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಮಲಗಿರುವ ಸಹದ್ಯೋಗಿಯನ್ನು ಯಾವುದೇ ಅಧಿಕಾರಿಯೂ ನೋಡಲು ಬಂದಿಲ್ಲ. ಪೊಲೀಸ್ ಇಲಾಖೆ ಹೊಂದಿರುವ ಆರೋಗ್ಯ ಭಾಗ್ಯ ಯೋಜನೆಯ ಲಿಸ್ಟ್ ನಲ್ಲಿ ಸ್ಪರ್ಶ ಆಸ್ಪತ್ರೆಯಿಲ್ಲ. ಹೀಗಾಗಿ ಚಿಕಿತ್ಸೆಗೆಂದು ಗೋಪಾಲ್ ಕುಟುಂಬಸ್ಥರು ಈಗಾಗಲೇ 3 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಮತ್ತೆ 2 ರಿಂದ 3 ಲಕ್ಷ ರೂ. ವೆಚ್ಚ ಮಾಡಬೇಕಾದ ಅಗತ್ಯವಿದೆ. ಆದರೆ ಘಟನೆಯಲ್ಲಿ ಗೋಪಾಲ್ ಬದುಕುಳಿದಿದ್ದೇ ದೊಡ್ಡದು ಎಂದು ಕುಟುಂಬದ ಸದಸ್ಯರು ಸುಮ್ಮನಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಸ್‌ಟಿ ಅಂದ್ರೆ ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್: ಮಮತಾ ಬ್ಯಾನರ್ಜಿ