ಮಂಡ್ಯ ಜಿಲ್ಲೆಯ ಮಾಜಿ ಸಂಸದೆ ರಮ್ಯ ವಿರುದ್ಧ ಕನ್ನಡ ಪರ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಾತ್ರೆ ರಾಣಿ ಸಂತೆ ರಮ್ಯಾಗೆ ಧಿಕ್ಕಾರ ಎನ್ನುವ ಘೋಷಣೆಗಳನ್ನು ಕೂಗಿದ ಘಟನೆ ವರದಿಯಾಗಿದೆ.
ಮಾಜಿ ಸಂಸದೆ ರಮ್ಯ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿದ ಪ್ರತಿಭಟನಾಕಾರರು, ಜಿಲ್ಲೆಯ ಜನತೆ ಕಾವೇರಿ ನೀರಿನ ಬರದಿಂದ ತತ್ತರಿಸುತ್ತಿದ್ದರೂ ಹೋರಾಟದಲ್ಲಿ ಕಾಣಿಸಿಕೊಳ್ಳದೆ ಮಾಯವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮನಬಂದಂತೆ ಹೇಳಿಕೆ ನೀಡುತ್ತಾ ವಿವಾದಗಳಿಗೆ ಗುರಿಯಾಗುತ್ತಿರುವ ರಮ್ಯಾಗೆ ಮಂಡ್ಯ ಜಿಲ್ಲೆಯ ಜನರ ಸಂಕಷ್ಟಗಳ ಅರಿವು ಇಲ್ಲ. ಕೇವಲ ಬೊಗಳೆಗಳನ್ನು ಬಿಡುವುದೇ ಅವರ ಕಾಯಕವಾಗಿದೆ ಎಂದು ಕಿಡಿಕಾರಿದ್ದಾರೆ.
ಮುಂಬರುವ ದಿನಗಳಲ್ಲಿ ಜಾತ್ರೆ ರಾಣಿ ಸಂತೆ ರಮ್ಯಾಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಕನ್ನಡ ಪರ ಹೋರಾಟಗಾರರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ