Select Your Language

Notifications

webdunia
webdunia
webdunia
webdunia

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ

protest
bangalore , ಬುಧವಾರ, 20 ಸೆಪ್ಟಂಬರ್ 2023 (14:42 IST)
ಕನ್ನಡಪರ ಸಂಘಟನೆಗಳ (ಕನ್ನಡಿಗರ ರಕ್ಷಣಾ ವೇದಿಕೆ ) ಯಿಂದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.ಕಾವೇರಿಯ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಗಿದೆ.ಕನ್ನಡದ ಚಿತ್ರರಂಗದ ಎಲ್ಲಾ  ನಟರ ವಿರುದ್ಧ ಆಕ್ರೋಶ  ಹೊರಹಾಕಿದ್ದು,ಕರ್ನಾಟಕದಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆ.ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದಾರೆ.
 
ಕಾವೇರಿ ನೀರಿನ ಬಗ್ಗೆ ರೈತರು ಮತ್ತು ಕನ್ನಡಪರ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ.ಕಾವೇರಿ ನೀರು ಬಗ್ಗೆ ಕನ್ನಡ ಚಲನಚಿತ್ರ  ನಟರು ಧ್ವನಿ ಎತ್ತಿಲ್ಲ.ಕಾವೇರಿಯ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರ ವಿರುದ್ಧ ಧಿಕ್ಕಾರ .ನಮ್ಮ ನಾಡಿಗೆ ಆಗುತ್ತಿರುವ ಅನ್ಯಾಯವನ್ನ ನೋಡಿಕೊಂಡು ಸುಮ್ಮನೆ ಕುಳಿತಿರುವ ಕನ್ನಡದ ಚಿತ್ರರಂಗದ ಎಲ್ಲಾ  ನಟರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಮೀಸಲಾತಿ ಮಂಡನೆ ಬಿಜೆಪಿ ಕಛೇರಿ ಮುಂಭಾಗ ಮಹಿಳೆಯರ ಸಂಭ್ರಮ