Select Your Language

Notifications

webdunia
webdunia
webdunia
webdunia

ಕರ್ಮಕಾಂಡ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧವೇ ಪ್ರತಿಭಟನೆ ಜೋರು

ಕರ್ಮಕಾಂಡ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧವೇ ಪ್ರತಿಭಟನೆ ಜೋರು
Bangalore , ಸೋಮವಾರ, 17 ಜುಲೈ 2017 (12:45 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳ ಬಗ್ಗೆ ಡಿಐಜಿ ರೂಪಾ ಎರಡನೇ ವರದಿ ನೀಡಿದ ಬೆನ್ನಲ್ಲೇ ಅವರ ವಿರುದ್ಧ ಪ್ರತಿಭಟನೆಗಳೂ ಜೋರಾಗಿವೆ.


ಇಂದು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಕ್ರಮ ಬಯಲಿಗೆಳೆದ ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಪ್ರತಿಭಟನೆ ನಡೆದಿದೆ. ಡಿಐಜಿ ರೂಪಾ ಪೊಲೀಸ್ ಇಲಾಖೆಯ ರಹಸ್ಯಗಳನ್ನು ಗೌಪ್ಯತೆ ಕಾಪಾಡಿಕೊಳ್ಳದೆ ಮಾಧ್ಯಮಗಳಿಗೆ ಹರಿಯಬಿಟ್ಟಿದ್ದಾರೆ ಎಂದು ಈ ಸಂಘಟನೆಗಳು ಆರೋಪಿಸಿವೆ.

ಇನ್ನೊಂದೆಡೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಡಿಐಜಿ ರೂಪಾ ಅವರಿಗೆ ಮಾಹಿತಿ ನೀಡಿದ್ದ ಶಂಕಿತ ಖೈದಿಗಳನ್ನು ರಾತ್ರೋ ರಾತ್ರಿ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಲಾಗಿದೆ. ಸರ್ಕಾರ ನೇಮಿಸಿದ ತನಿಖಾ ತಂಡ ಬರುವ ಮೊದಲೇ ಸಾಕ್ಷ್ಯ ನಾಶಕ್ಕಾಗಿ ಎಲ್ಲಾ ರೀತಿಯ ತೆರೆ ಮರೆಯ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫ್ರಂಟ್, ಬ್ಯಾಕ್, ರೈಟ್ ಲೆಫ್ಟ್ ಎಲ್ಲರಿಗೂ ಹುದ್ದೆ ದೊರೆತಿವೆ: ಅಂಜನೇಯ