Webdunia - Bharat's app for daily news and videos

Install App

ಹೊರರಾಜ್ಯದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ರೌಡಿ ಅರೆಸ್ಟ್

Webdunia
ಸೋಮವಾರ, 9 ಆಗಸ್ಟ್ 2021 (22:38 IST)
ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಹೊರ ರಾಜ್ಯದ ಮಹಿಳೆಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ರೌಡಿಶೀಟರ್‍ವೊಬ್ಬನನ್ನು ಸಿಸಿಬಿ ವಿಶೇಷ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಗೂಂಡಾ ಕಾಯಿದೆಯಡಿ ಬಂಧಿಸಿದ್ದಾರೆ. 
ಎಂ.ಎನ್. ನವೀನ್ (28) ಬಂಧಿತ ಆರೋಪಿ.  ಈತನು ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದು, ನಗರದಲ್ಲಿ ನೆಲೆಸಿ, ತನ್ನ ಸಹಚರರ ಮೂಲಕ ಹೊರ ರಾಜ್ಯದ ಯುವತಿಯರನ್ನು ಕರೆತಂದು ಹೋಟೆಲ್, ಲಾಡ್ಜ್‍ಗಳಲ್ಲಿ ಇಡುತ್ತಿದ್ದ. ಬಳಿಕ ಹಣವಿರುವ ಗಿರಾಕಿಗಳಿಗೆ ಈ ಯುವತಿಯರನ್ನು ಕಳುಹಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು.
ಆರೋಪಿ ವಿರುದ್ಧ ಜಯನಗರ, ಜೆಪಿನಗರ, ಕೆಎಸ್ ಲೇಔಟ್, ಬಾಣಸವಾಡಿ ಪೆÇಲೀಸ್ ಠಾಣೆಗಳಲ್ಲೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿವೆ. 
ನವೀನ್ ಜೈಲಿಗೆ ಹೋಗಿ ಬಂದ ಬಳಿಕವೂ ದಂಧೆ ಮುಂದುವರಿಸಿದ್ದ. ಹಾಗಾಗಿ, ಈತನನ್ನು ಗೂಂಡಾ ಕಾಯಿದೆಯಡಿಯಲ್ಲಿ ಬಂಧಿಸಲು ಸಿಸಿಬಿ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಸಿಸಿಬಿ ಅಧಿಕಾರಿಗಳ ವರದಿಯನ್ನು ಅಪರಾಧ ವಿಭಾಗದ ಡಿಸಿಪಿ ಕೆ.ಪಿ. ರವಿಕುಮಾರ್ ಹಾಗೂ ಜಂಟಿ ಪೆÇಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಈತನ ಬಂಧನಕ್ಕೆ ಶಿಫಾರಸು ಮಾಡಿದ್ದರು. ಅದರಂತೆ, ನಗರ ಪೆÇಲೀಸ್ ಆಯುಕ್ತ ಕಮಲ್‍ಪಂತ್ ಅವರು ಆರೋಪಿಯನ್ನು ಗೂಂಡಾ ಕಾಯಿದೆಯಡಿ ಬಂಧಿಸುವಂತೆ ಆದೇಶಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ ಗಾಂಧಿ ದಾಖಲೆ ಹಿಂದಿಕ್ಕಿ ದೀರ್ಘಾವಧಿ ಪ್ರಧಾನಿ ಹೆಗ್ಗಳಿಕೆಗೆ ಪಾತ್ರವಾದ ನರೇಂದ್ರ ಮೋದಿ

ಉಡುಪಿಯಲ್ಲಿ ಮುಂದಿನ 2 ದಿನ ಭಾರೀ ಗಾಳಿ ಮಳೆ, ರೆಡ್ ಅಲರ್ಟ್ ಘೋಷಣೆ

ಪರಿಷ್ಕೃತ ಶಾಲಾ ಸಮಯವನ್ನು ಮುಂದುವರೆಸುವಂತೆ ಕೇರಳ ಸರ್ಕಾರ ಸೂಚನೆ

ಮೈಸೂರು ಮಹಾರಾಜರಿಗಿಂತಲೂ ಗ್ರೇಟ್ ನಮ್ಮಪ್ಪ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments