Webdunia - Bharat's app for daily news and videos

Install App

ಎಚ್ಚರಿಕೆ ಬಳಿಕವು ನಿಷೇಧಿತ ಬಣ್ಣ ಬಳಕೆ: 6 ಎಂಫೈರ್ ಹೊಟೇಲ್ ವಿರುದ್ಧ ಕ್ರಮಕ್ಕೆ ಚಿಂತನೆ

Sampriya
ಭಾನುವಾರ, 27 ಜುಲೈ 2025 (15:50 IST)
Photo Credit X
ಬೆಂಗಳೂರು: ಎಚ್ಚರಿಕೆಯ ಬಳಿಕವು ನಿಷೇಧಿತ ಬಣ್ಣವನ್ನು ಆಹಾರ-ತಿನಿಸುಗಳಲ್ಲಿ ಬಳಸಿದ್ದಕ್ಕಾಗಿ ಬೆಂಗಳೂರಿನ 6 ಎಂಫೈರ್ ಹೊಟೇಲ್ ವಿರುದ್ಧಧ ಕೇಸ್ ದಾಖಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. 

ಈಗಾಗಲೇ ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದ್ದು, ನಂತರವೂ, ಬೆಂಗಳೂರಿನಲ್ಲಿ ಇತರೆ ಮಳಿಗೆಗಳಲ್ಲಿ ಸಂಗ್ರಹಿಸಲಾದ ಚಿಕನ್ ಕಬಾಬ್‌ನ ಮಾದರಿಗಳಲ್ಲಿ ನಿಷೇಧಿತ ಕೃತಕ ಬಣ್ಣ ಬಳಕೆ ಮಾಡಿರುವುದು ಕಂಡುಬಂದಿದೆ. ಈ ಬೆಳವಣಿಗೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತಿಸಿದೆ.

ನಗರದಾದ್ಯಂತ ಇರುವ ರೆಸ್ಟೋರೆಂಟ್‌ನ ಆರು ಮಳಿಗೆಗಳಿಂದ ಸಂಗ್ರಹಿಸಲಾದ ಮಾದರಿಗಳ ಫಲಿತಾಂಶಗಳು ಕಬಾಬ್‌ಗಳಲ್ಲಿ ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್ ಮತ್ತು ಟಾರ್ಟ್ರಾಜಿನ್ ಇರುವುದು ಕಂಡುಬಂದಿದೆ,

ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಆಹಾರ ಉತ್ಪನ್ನಗಳು ಮತ್ತು ವ್ಯಸನಕಾರಿ) ನಿಯಮಗಳು 2011 ರ ಪ್ರಕಾರ ಇವುಗಳನ್ನು ಬಳಸಬಾರದು ಎಂದು ತಿಳಿಸಿದೆ. ಇದು ಮಾನವ ಸೇವನೆಗೆ ಅಸುರಕ್ಷಿತ ಎಂದು ತಿಳಿಸಲಾಗಿದೆ. ಆದರೂ ನಿಷೇಧಿತ ಕೃತಕ ಬಣ್ಣಗಳನ್ನು ಬಳಕೆ ಮಾಡುತ್ತಿದ್ದಾರೆ.


ಚಿಕನ್ ಕಬಾಬ್‌ಗಳು ಮತ್ತು ಶವರ್ಮಾಗಳಿಗೆ ಹೆಸರುವಾಸಿಯಾದ ಪ್ರಮುಖ ಎಂಪೈರ್ ರೆಸ್ಟೋರೆಂಟ್‌ನಿಂದ ಸಂಗ್ರಹಿಸಲಾದ ತಿನಿಸಿನಲ್ಲೂ ಕೃತಕ ಬಣ್ಣ ಬಳಕೆ ಪತ್ತೆಯಾಗಿದೆ. ನಿಯಮ ಉಲ್ಲಂಘನೆ ಎರಡನೇ ಬಾರಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಎಂಪೈರ್ ರೆಸ್ಟೋರೆಂಟ್ ಗ್ರೂಪ್‌ಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನವೇರಿ ಜಪಾನ್‌ಗೆ ತಲುಪಿದ ಬನ್ನೇರುಘಟ್ಟದ ಆನೆಗಳ ಮೊದಲ ವಿಡಿಯೋ ಇಲ್ಲಿದೆ

ಕಾವೇರಿ ಕೊಳ್ಳದಲ್ಲಿ ಪ್ರವಾಹ ಭೀತಿ: ಪಿಂಡ ಪ್ರದಾನ, ಪ್ರವಾಸಿ ತಾಣಗಳಿಗೆ ನಿಷೇಧ ಹೇರಿದ ಜಿಲ್ಲಾಡಳಿತ

ಮಲೆನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆ: ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಸಿನಿಮೀಯ ರೀತಿಯಲ್ಲಿ ಚಿರತೆ ದಾಳಿಯಿಂದ ಪಾರಾದ ಬೈಕ್ ಸವಾರ, ಮೈ ಝುಮ್‌ ಅನ್ನಿಸುವ ವಿಡಿಯೋ

ಮಾನಸಾ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ: 7 ಮಂದಿ ಸಾವು, 28 ಮಂದಿ ಗಂಭೀರ

ಮುಂದಿನ ಸುದ್ದಿ
Show comments