Select Your Language

Notifications

webdunia
webdunia
webdunia
Sunday, 13 April 2025
webdunia

ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗ ಮಾಡಿದಳು: ಮೋದಿ ವಿರುದ್ಧ ಪ್ರಿಯಾಂಕ ವಾದ್ರಾ ಗುಡುಗು

Priyanka Vadra

Krishnaveni K

ಬೆಂಗಳೂರು , ಬುಧವಾರ, 24 ಏಪ್ರಿಲ್ 2024 (09:44 IST)
ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯಕ್ಕೆ ಕುತ್ತಾಗುಲಿದೆ ಎಂಬ ಹೇಳಿಕೆ ನೀಡಿದ್ದಕ್ಕೆ ಪ್ರಿಯಾಂಕಾ ವಾದ್ರಾ ತಿರುಗೇಟು ನೀಡಿದ್ದಾರೆ.

ರಾಜಸ್ಥಾನದ ಚುನಾವಣಾ ಪ್ರಚಾರ ವೇಳೆ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯವನ್ನೂ ಕಿತ್ತುಕೊಳ್ಳುತ್ತದೆ. ನಿಮ್ಮ ಆಸ್ತಿ, ಚಿನ್ನವನ್ನು ಕಿತ್ತುಕೊಂಡು ಈ ದೇಶದಲ್ಲಿ ಹೆಚ್ಚು ಮಕ್ಕಳಿರುವ ಸಮುದಾಯದವರಿಗೆ ಹಂಚುತ್ತದೆ ಎಂದು ಪರೋಕ್ಷವಾಗಿ ಮುಸ್ಲಿಮರ ಓಲೈಕೆ ಮಾಡುವ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದರು.

ಇದಕ್ಕೆ ಬೆಂಗಳೂರಿನಲ್ಲಿ ಪ್ರಿಯಾಂಕ ವಾದ್ರಾ ತಿರುಗೇಟು ನೀಡಿದ್ದಾರೆ. ‘ಎಷ್ಟು ಹಸಿ ಹಸಿ ಸುಳ್ಳು ಹೇಳುತ್ತಾರೆ. ಇತ್ತೀಚೆಗೆ ನಾವು ಮಹಿಳೆಯರ ಮಾಂಗಲ್ಯ ಕಿತ್ತುಕೊಳ್ಳುತ್ತೇವೆ, ಆಸ್ತಿ ಕಿತ್ತುಕೊಳ‍್ಳುತ್ತೇವೆ ಎಂದು ಸುಳ್ಳು ಹೇಳಿದ್ದಾರೆ. ನಾವು 70 ವರ್ಷ ಅಧಿಕಾರದಲ್ಲಿದ್ದೆವು. ಒಮ್ಮೆಯಾದರೂ ಕಾಂಗ್ರೆಸ್ ನಿಮ್ಮ ಮಾಂಗಲ್ಯಕ್ಕೆ ಕೈ ಹಾಕಿದೆಯಾ? ನಿಮ್ಮ ಆಸ್ತಿಯನ್ನು ಕಿತ್ತುಕೊಂಡಿದ್ದೇವಾ? ದೇಶಕ್ಕೆ ಅಗತ್ಯ ಬಂದಾಗ ಇಂದಿರಾ ಗಾಂಧಿಯವರು ತಮ್ಮ ಸ್ವಂತ ಚಿನ್ನವನ್ನು ನೀಡಿದರು. ನನ್ನ ತಾಯಿ ಈ ದೇಶಕ್ಕಾಗಿ ತಮ್ಮ ಮಾಂಗಲ್ಯವನ್ನೇ ಬಲಿದಾನ ಮಾಡಿದರು. ಗೊತ್ತಿಲ್ಲದೇ ಏನೇನೋ ಮಾತನಾಡಬಾರದು’ ಎಂದು ಪ್ರಿಯಾಂಕ ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ಮೋದಿ ನಿಜವಾಗಿಯೂ ಸಮುದಾಯವನ್ನು ಒಡೆಯುವ ಕೆಲಸ ಮಾಡುವವರಲ್ಲ ಎಂದರೆ, ಈಗ ಚುನಾವಣೆ ಸಮಯದಲ್ಲಿ ಇಂತಹ ಹೇಳಿಕೆ ನೀಡಿರುವುದು ಯಾಕೆ ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮನ ಫೋಟೋ ಇರುವ ಪ್ಲೇಟ್ ನಲ್ಲಿ ಚಿಕನ್ ಬಿರಿಯಾನಿ ವಿತರಣೆ: ಹಿಂದೂಗಳ ಆಕ್ರೋಶ