Daily Horoscope

Select Your Language

Notifications

webdunia
webdunia
webdunia
webdunia

ಮಸೀದಿ ಕೆಡವಿದ್ರೆ ದೇವಾಲಯ ಸಿಗುವಂತೆ ದೇವಾಲಯ ಕೆಡವಿದ್ರೂ ಸ್ತೂಪ ಸಿಗುತ್ತದೆ: ಪ್ರಿಯಾಂಕ್ ಖರ್ಗೆ ವಿವಾದ

Priyank Kharge
ಬೆಂಗಳೂರು: ಮಸೀದಿ ಕೆಡವಿದ್ರೆ ದೇವಾಲಯ ಸಿಗುವಂತೆ ದೇವಾಲಯ ಕೆಡವಿದ್ರೂ ಸ್ತೂಪ ಸಿಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿ ವಿವಾದದ ಕಿಡಿ ಹತ್ತಿಸಿದ್ದಾರೆ.

ನವೀನ್ ಸೂರಿಂಜೆಯವರ ಕರಾವಳಿ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಿಯಾಂಕ್ ಖರ್ಗೆ ಈ ವಿವಾದಿತ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನೀವು ಇತಿಹಾಸವನ್ನು ಹುಡುಕಿದರೆ ಮಸೀದಿಯನ್ನು ಕೆಡವಿದರೆ ದೇವಾಲಯ ಸಿಗುತ್ತದೆ. ಅದೇ ರೀತಿ ದೇವಾಲಯವನ್ನು ಕೆಡವಿದರೂ ಸ್ತೂಪ ಸಿಗಬಹುದು. ಸ್ತೂಪವನ್ನು ಕೆಡವಿದರೆ ಏನು ಸಿಗುತ್ತದೆ ಎಂದು ನನಗೆ ಗೊತ್ತಿಲ್ಲ. 3,500 ವರ್ಷಗಳ ಇತಿಹಾಸವನ್ನು ಆಧರಿಸಿ ನಾನು ಈ ಹೇಳಿಕೆ ನೀಡುತ್ತಿದ್ದೇನೆ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ. ಇದೇ ವೇಳೆ ಟಿಪ್ಪು ಸುಲ್ತಾನ ಸ್ವಾತಂತ್ರ್ಯ ಹೋರಾಟಗಾರ ಎಂದಿರುವ ಅವರು ಬಿಜೆಪಿ ಮತ್ತು ಆರ್ ಎಸ್ಎಸ್ ನವರು ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎನ್ನುವುದನ್ನು ಉಲ್ಲೇಖಿಸಿ ಟೀಕಿಸಿದ್ದಾರೆ. ಟಿಪ್ಪು ಸುಲ್ತಾನ ತೋಟಗಾರಿಕೆಯ ಪಿತಾಮಹ ಆಗಿದ್ದರು. ಅದಕ್ಕೆ ಸಾಕಷ್ಟು ದಾಖಲೆಗಳೂ ಇವೆ ಎಂದು ಪ್ರತಿಪಾದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರ ಬಲು ಜೋರು