ಆರ್ ಎಸ್ಎಸ್ ಗೆ ದಲಿತ ಚಾಲೆಂಜ್ ಹಾಕಿದ ಪ್ರಿಯಾಂಕ್ ಖರ್ಗೆ: ನಿಮ್ಮಲ್ಲಿ ದಲಿತರನ್ನು ಸಿಎಂ ಮಾಡಿ ಎಂದ ಪಬ್ಲಿಕ್

Krishnaveni K
ಬುಧವಾರ, 15 ಅಕ್ಟೋಬರ್ 2025 (09:06 IST)
ಬೆಂಗಳೂರು: ತಾಕತ್ತಿದ್ದರೆ ಆರ್ ಎಸ್ಎಸ್ ನವರು ತಮ್ಮ ನಾಯಕನಾಗಿ ಒಬ್ಬ ದಲಿತನನ್ನು ನೇಮಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಸವಾಲು ಹಾಕಿದ್ದರು. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ನೀವು ದಲಿತ ಸಿಎಂ ಆಯ್ಕೆ ಮಾಡಿ ನೋಡೋಣ ಎಂದಿದ್ದಾರೆ.

ಆರ್ ಎಸ್ಎಸ್ ಸಂಘಟನೆ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಇನ್ನೂ ಮುಂದುವರಿದಿದೆ. ತಮ್ಮ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿಯವರಿಗೆ ತಿರುಗೇಟು ಕೊಟ್ಟಿರುವ ಪ್ರಿಯಾಂಕ್ ಖರ್ಗೆ, ನಿಮಗೆ ಆರ್ ಎಸ್ಎಸ್ ನಾಯಕರ ಮೇಲೆ ಅಷ್ಟು ನಂಬಿಕೆಯಿದ್ದರೆ ಅವರಿಗೆ ಒಬ್ಬ ದಲಿತ ಮಹಿಳೆಯನ್ನು ಆರ್ ಎಸ್ಎಸ್ ಸರಸಂಘಚಾಲಕನಾಗಿ ನೇಮಿಸಲು ಹೇಳಿ. ನೀವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದೀರಿ ಎಂದು ನಿಮ್ಮ ಬಿಜೆಪಿಯವರೇ ಹೇಳ್ತಿದ್ದಾರೆ. ಇದೇ ಕಾರಣಕ್ಕೆನಾ ನೀವು ಬಿಜೆಪಿಯವರ ಘರ್ ವಾಪ್ಸಿಯನ್ನು ವಿರೋಧಿಸಿದ್ದು ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಬಿಜೆಪಿಯವರ ಕತೆ ಬಿಡಿ, ನಿಮ್ಮ ಕಾಂಗ್ರೆಸ್ ನಲ್ಲಿ ಸಿಎಂ ಆಗಿ ಒಬ್ಬ ದಲಿತನನ್ನು ನೇಮಿಸಿ ನೋಡೋಣ. ಹೋಗಲಿ ನಿಮ್ಮ ತಂದೆಯವರೇ ದಲಿತರಾಗಿದ್ದರೂ ಸಿಎಂ ಪಟ್ಟಕ್ಕೇರಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಎಂಕೆ ದುಷ್ಟ, ಟಿವಿಕೆ ಶುದ್ಧ ಶಕ್ತಿ: ಕರೂರ್ ದುರಂತದ ಬಳಿಕ ವಿಜಯ್ ಮೊದಲ ರ್ಯಾಲಿ

ಮಹಿಳಾ ಪೊಲೀಸ್ ಅಧಿಕಾರಿಯ ಸರವನ್ನೇ ಎಗರಿಸಿದ ಖದೀಮರು, ಎಲ್ಲಿ ಗೊತ್ತಾ

ಟೇಕ್‌ ಆಫ್ ವೇಳೆ ಟೈರ್‌ ಬ್ಲಾಸ್ಟ್, ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶವಾದ ಏರ್ ಇಂಡಿಯಾ ಫ್ಲೈಟ್‌

ವಿದೇಶಕ್ಕೆ ಹೋಗಿ ಮತ್ತೆ ಭಾರತವನ್ನು ಟೀಕಿಸಿದ ರಾಹುಲ್ ಗಾಂಧಿ

ಪ್ರೀತಿ ಹೆಸರಿನಲ್ಲಿ ಸ್ನೇಹಿತರೊಂದಿಗೆ ಯುವತಿ ಮೇಲೆ ಗ್ಯಾಂಗ್ ರೇಪ್‌, 3ಅರೆಸ್ಟ್‌

ಮುಂದಿನ ಸುದ್ದಿ
Show comments