Publish Date: Sat, 27 May 2023 (15:21 IST)
Updated Date: Sat, 27 May 2023 (14:25 IST)
ಇಂದು 24 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಸಚಿವ ಸ್ಥಾನ ಸಿಗದ ಕಾಂಗ್ರೆಸ್ ಶಾಸಕರಾದ ಪ್ರಿಯಾ ಕೃಷ್ಣ ಹಾಗೂ ಎಂ. ಕೃಷ್ಣಪ್ಪ ಬೆಂಬಲಿಗರ ಆಕ್ರೋಶ ಹೊರಹಾಕಿದ್ದಾರೆ.ರಾಜಭವನ ಮುಂಭಾಗ ಶಾಸಕರ ಬೆಂಬಲಿಗರ ಜಮಾವಣೆಯಾಗಿದ್ದು,ಕಾಂಗ್ರೆಸ್ ಕಾರ್ಯಕರ್ತರನ್ನು ನಿಯಂತ್ರಿಸಲು ಪೋಲೀಸರ ಹರಸಾಹಸ ಪಾಡುತ್ತಿದ್ದಾರೆ.ಪ್ರಿಯಾ ಕೃಷ್ಣ ಹಾಗೂ ಎಂ. ಕೃಷ್ಣಪ್ಪ ಭಾವಚಿತ್ರ ಹಿಡಿದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.ಅಯ್ಯಯ್ಯೋ ಅನ್ಯಾಯ ಎಂದು ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕ್ತಿದ್ದಾರೆ.