Publish Date: Mon, 27 Feb 2017 (08:17 IST)
Updated Date: Mon, 27 Feb 2017 (08:20 IST)
ಅಪ್ರಾಪ್ತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೈಲು ಸೇರಿರುವ ನಾಲ್ವರು ಆರೋಪಿಗಳಿಗೆ ಅಲ್ಲಿನ ಕೈದಿಗಳು ತಕ್ಕ ಪಾಠ ಕಲಿಸಿದ ಘಟನೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದೆ.
ನಿಮಗೆ ಅಕ್ಕತಂಗಿಯರಿಲ್ಲವೇ? ನಿಮ್ಮದು ಮನುಷ್ಯ ಜನ್ಮವಾ ಎಂದು ಕಿರುಚಾಡಿದ ಕೈದಿಗಳು ಕೋಪದ ಭರದಲ್ಲಿ ನಾಲ್ಕೇಟು ಸಹ ಹಾಕಿದ್ದಾರೆ. ಬಳಿಕ ಈ ನಾಲ್ವರು ಆರೋಪಿಗಳಿಗೆ ಜೈಲಿನ ಶೌಚಾಲಯ ತೊಳೆಯುವ ಕೆಲಸಕ್ಕೆ ಹಚ್ಚಿದ್ದಾರೆ.
ಪ್ರೇಮಿಗಳ ದಿನದ ಮರುದಿನ ಬೆಳಗಾವಿಯ ಹೊರವಲಯದ ಕಾಕತಿ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು, ಸಂಪೂರ್ಣ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಆರೋಪಿಗಳೀಗ ಜೈಲು ಪಾಲಾಗಿದ್ದಾರೆ.
ಕೈದಿಗಳು ಹೀನ ಕೃತ್ಯ ಎಸದವರಿಗೆ ಶಿಕ್ಷೆ ನೀಡುತ್ತಿರುವುದು ಇದೇ ಮೊದಲಲ್ಲ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿವಾಹಿತೆ ಮತ್ತು ಆಕೆಯ ಮಕ್ಕಳಿಬ್ಬರನ್ನು ಕೊಂದು ಬರ್ಬರವಾಗಿ ಕೊಂದು ಜೈಲು ಸೇರಿದ್ದ ಪ್ರವೀಣ್ ಎಂಬಾತನಿಗೂ ಸಹ ಕೈದಿಗಳು ತಕ್ಕ ಬುದ್ಧ ಕಲಿಸಿದ್ದರು.