ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲೆ ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ

Webdunia
ಮಂಗಳವಾರ, 19 ಡಿಸೆಂಬರ್ 2017 (08:13 IST)
ಮಂಗಳೂರು: ಗುಜರಾತ್ ಹಾಗು ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಸಂತಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ವಿಮಾನದಲ್ಲಿ ರಾತ್ರಿ 11.45ಕ್ಕೆ ಮಂಗಳೂರಿಗೆ ಆಗಮಿಸಿದ ಅವರನ್ನು ಮಂಗಳೂರಿನ ಜನತೆ ಆದರದಿಂದ ಸ್ವಾಗತಿಸಿದರು.


ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಪಕ್ಷದ ಕಾರ್ಯಕರ್ತರಿಗೆ ಹಾಗು ಜನತೆಗೆ ಕೈ ಬೀಸಿ ಮೋದಿಯವರು ಗೆಲುವಿನ ಖುಷಿ ಹಂಚಿಕೊಂಡಿದ್ದಾರೆ. ಅಲ್ಲಿ ಕೇಂದ್ರ ಸಚಿವ ರಾಧಾಕೃಷ್ಣನ್, ಜಿಲ್ಲಾಧಿಕಾರಿ ಸಸಿಕಾಂತ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣೆ ರಾಜು ಮೊದಲಾದವರು ಇದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ.
ಮೋದಿಯವರು ಅಲ್ಲಿಂದ ಸರ್ಕಾರಿ ಅತಿಥಿ ಗೃಹಕ್ಕೆ ತೆರಳಿದರು.


ಇಂದು ವಿಮಾನದಲ್ಲಿ ಕೊಚ್ಚಿಗೆ ತೆರಳಿ, ಓಖ್ಹಿ ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿನೀಡಲಿದ್ದಾರೆ. ನಂತರ ತಮಿಳುನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಬಿಜೆಪಿ, ಜೆಡಿಎಸ್ ಗೆ ಮಹತ್ವದ ಸಂದೇಶ ಕೊಟ್ಟ ಡಿಕೆ ಶಿವಕುಮಾರ್

ಒಪ್ಪಂದದ ಬಗ್ಗೆ ಸಂಚಲನ ಸೃಷ್ಟಿಸುತ್ತಿದೆ ಡಿಕೆ ಶಿವಕುಮಾರ್ ಇಂದಿನ ಟ್ವೀಟ್

ಪಹಲ್ಗಾಮ್ ದಾಳಿ ಆಂತರಿಕ ದಂಗೆ ಎಂದಿದ್ದ ಅಮೆರಿಕಾ: ಈಗ ವೈಟ್ ಹೌಸ್ ದಾಳಿಯನ್ನು ಉಗ್ರರದ್ದು ಎನ್ನುತ್ತಿದೆ

ಡಿಕೆ ಶಿವಕುಮಾರ್ ರನ್ನು ಅಷ್ಟು ಬೇಗ ಬಿಟ್ಟು ಕೊಡಲ್ಲ ರಾಹುಲ್ ಗಾಂಧಿ: ಕಾರಣವೇನು ಗೊತ್ತಾ

Karnataka Weather: ಬೆಂಗಳೂರಿಗೆ ಚಳಿ, ಯಾವೆಲ್ಲಾ ಜಿಲ್ಲೆಗಳಿಗೆ ಮಳೆ ಇಲ್ಲಿದೆ ಹವಾಮಾನ ವರದಿ

ಮುಂದಿನ ಸುದ್ದಿ
Show comments