ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಆವೃತ್ತಿಯ ವಿಶ್ವ ಆಹಾರ ಭಾರತ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ದೇಶದ ಆಹಾರ ವಲಯ ಹೊಸ ಎತ್ತರಕ್ಕೆ ಹೋಗಿದೆ. ಭಾರತ ಆಹಾರ ವೈವಿಧ್ಯತೆಯು ಜಾಗತಿಕ ಹೂಡಿಕೆದಾರರಿಗೆ ಲಾಭಾಂಶ ತಂದುಕೊಡುತ್ತದೆ ಎಂದು ಹೇಳಿದ್ದಾರೆ.