Select Your Language

Notifications

webdunia
webdunia
webdunia
webdunia

ದಸರಾ ಬಳಿಕ ಪ್ರಾಥಮಿಕ ಶಾಲೆಗಳು ಆರಂಭ ಸಾಧ್ಯತೆ

ದಸರಾ ಬಳಿಕ ಪ್ರಾಥಮಿಕ ಶಾಲೆಗಳು ಆರಂಭ ಸಾಧ್ಯತೆ
bangalore , ಮಂಗಳವಾರ, 28 ಸೆಪ್ಟಂಬರ್ 2021 (20:16 IST)
ಕಳೆದ ಒಂದೂವರೆ ವರ್ಷದಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವ ಪ್ರಾಥಮಿಕ ಶಾಲೆಗಳನ್ನು ದಸರಾ ಹಬ್ಬದ ನಂತರ ಆರಂಭಿಸಲು ಸರ್ಕಾರ ಮುಂದಾಗಿದೆ. 
 
ಈಗಾಗಲೇ ರಾಜ್ಯದಲ್ಲಿ 6 ರಿಂದ 12ನೇ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಬಳಿಕ ಶೀಘ್ರವೇ ಪ್ರಾಥಮಿಕ ಶಾಲೆ ಆರಂಭವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
 
1ರಿಂ 5ನೇ ತರಗತಿಗಳ ಪ್ರಾರಂಭಕ್ಕೆ ಸರ್ಕಾರ ತಜ್ಞರ ಅಭಿಪ್ರಾಯ ಕೇಳಿದೆ. ತಜ್ಞರು ದಸರಾ ಬಳಿಕ ನೋಡೋಣ ಎಂದು ಸಲಹೆ ನೀಡಿದ್ದಾರೆ. ತಜ್ಞರ ವರದಿ ಆಧರಿಸಿ ಸರ್ಕಾರ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.
 
ವಾರದಲ್ಲಿ ಮೂರು ದಿನ ಮಾತ್ರ ತರಗತಿ ನಡೆಯಲಿದೆ. 3 ದಿನ ಆಫ್‍ಲೈನ್ ಮತ್ತು ಮೂರು ದಿನ ಆನ್‍ಲೈನ್ ಕ್ಲಾಸ್ ನಡೆಸಲು ಚಿಂತನೆ ನಡೆದಿದೆ. ಕಡ್ಡಾಯವಾಗಿ ಕೇವಲ ಬೆಳಗ್ಗೆ ಮಾತ್ರ ತರಗತಿ ನಡೆಯಲಿದ್ದು, ವಿದ್ಯಾರ್ಥಿಗಳು ಹೆಚ್ಚಿರುವ ಕಡೆ 3+3 ದಿನ ತರಗತಿ ನಡೆಸಲು ಅನುಮತಿ ನೀಡುವ ಸಾಧ್ಯತೆಯಿದೆ.
 
ಹಾಜರಾತಿ ಕಡ್ಡಾಯವಲ್ಲ: ಶಾಲೆಗಳು ಪ್ರಾರಂಭವಾದರೂ ಮಕ್ಕಳ ಹಾಜರಾತಿ ಕಡ್ಡಾಯವಿಲ್ಲ. ಶಾಲೆಯಲ್ಲಿ ಕೊರೊನಾ ನಿಯಮ ಜಾರಿ ಸಂಬಂಧ ತಜ್ಞರ ವರದಿ ಆಧರಿಸಿ ವಿಶೇಷ ಮಾರ್ಗಸೂಚಿ ಪ್ರಕಟ ಮಾಡಿ ಆರಂಭಿಸಲು ಚಿಂತನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀರಮರಣವನ್ನೊಪ್ಪಿದ 5 ಜನ ಯೋಧರ ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಿದ ಬಿ.ಡಿ.ಎ