ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂಬುದಾಗಿ ತಿಳಿದುಬಂದಿದೆ.
ಆದ್ರೆ ನಿಗದಿಯಂತೆ ಜೂನ್ 14ರಂದು ಕಾರ್ಯಕ್ರಮ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹೇರಿದ ಹಿನ್ನಲೆಯಲ್ಲಿ ಸರ್ಕಾರದ ಅನುಮತಿ ಅಗತ್ಯವಿಲ್ಲ ಎಂದು ಕೈ ನಾಯಕರು ತೀರ್ಮಾನಿದ್ದಾರೆ. ಆದಕಾರಣ ಕಾರ್ಯಕ್ರಮ ವೆಬಿನಾರ್ ರೀತಿ ಇರಲಿದೆ. ಕಾರ್ಯಕರ್ತರು ಯಾರು ಒಂದು ಸ್ಥಳದಲ್ಲಿ ಸೇರುವುದಿಲ್ಲ. ಕೇವಲ ಕೆಲ ಕೈ ನಾಯಕರು ಮಾತ್ರ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ಅವಧಿ ಒಂದೂವರೆ ಗಂಟೆ ಮಾತ್ರ ಇರುತ್ತೆ. ಅನುಮತಿ ನೀಡದಿದ್ರೂ ಕಾರ್ಯಕ್ರಮ ಮಾಡಬೇಕು ಎಂದು ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.
ಕಾಂಗ್ರೆಸ್ ಟ್ವೀಟರ್ ಖಾತೆಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದು, ಕಾರ್ಯಕ್ರಮ ನಡೆಸುವುದಾಗಿ ಹೇಳಿರುವ ಸಿದ್ಧರಾಮಯ್ಯ ಹೇಳಿದ್ದಾರೆ. ಆದರೆ ಈ ಬಗ್ಗೆ ಡಿಕೆ ತೀರ್ಮಾನ ಏನೆಬುದೇ ಕುತೂಹಲಕಾರಿಯಾಗಿದೆ ಎನ್ನಲಾಗಿದೆ.