ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ ಭರ್ಜರಿ ಕಾರ್ಯಕ್ರಮಗಳ ತಯಾರಿ

Webdunia
ಸೋಮವಾರ, 26 ಸೆಪ್ಟಂಬರ್ 2022 (14:40 IST)
ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲಿಸಿದರು.
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಾಲಯ, ವೇದಿಕೆ, ವಿಶ್ರಾಂತಿ ಕೊಠಡಿ, ಪಾರ್ಕಿಂಗ್ ಜಾಗ, ಸಾರ್ವಜನಿಕರು ಆಸೀನರಾಗುವ ವೇದಿಕೆ ನಿರ್ಮಾಣ ಕಾರ್ಯ ಮುಂತಾದವುಗಳ ಅಂತಿಮ ಹಂತದ ತಯಾರಿಯನ್ನು ವೀಕ್ಷಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸಚಿವರಿಗೆ ಸಿದ್ಧತೆಗಳ ಬಗ್ಗೆ ವಿವರಿಸಿದರು.
 
ಬಳಿಕ ಮಾತನಾಡಿದ ಸಚಿವರು, ರಾಷ್ಟ್ರಪತಿಗಳು ಮೈಸೂರು ವಿಮಾನ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ನೇರವಾಗಿ ಬಂದಿಳಿಯಲಿದ್ದಾರೆ. ವೇದಿಕೆಯಲ್ಲಿ ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಸೇರಿ ೧೩ ಮಂದಿಗೆ ಅವಕಾಶವಿದೆ. ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮತ್ತೊಂದು ಕಡೆ ವೇದಿಕೆ ಇರುತ್ತದೆ. ರಾಷ್ಟ್ರಪತಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ಚಾಮರಾಜನಗರ, ಮಡಿಕೇರಿ ಭಾಗದ ೧೪ ಮಂದಿ ಆದಿವಾಸಿಗಳೊಂದಿಗೆ ಫೋಟೋ ಸೆಷನ್‌ಗೆ ಹತ್ತು ನಿಮಿಷಗಳ ಕಾಲ ಸಮಯ ಕೊಡುವಂತೆ ಕೇಳಿದ ಮನವಿಗೆ ಒಪ್ಪಿದ್ದು, ದೇವಸ್ಥಾನದ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments