119 ಸಾಧಕರಿಗೆ ಪದ್ಮಪ್ರಶಸ್ತಿ: ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ಪಟ್ಟಿ

Webdunia
ಸೋಮವಾರ, 8 ನವೆಂಬರ್ 2021 (19:34 IST)
ಇಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ 119 ಜನರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 7 ಮಂದಿಗೆ ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ.
ಪುರಸ್ಕೃತರಲ್ಲಿ 29 ಮಹಿಳೆಯರು, 16 ಮಂದಿಗೆ ಮರಣೋತ್ತರ ಪ್ರಶಸ್ತಿ ಮತ್ತು ಒಬ್ಬರು ತೃತಿಯ ಲಿಂಗಿ ಪ್ರಶಸ್ತಿ ಸೇರಿದ್ದಾರೆ.
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಮರಣೋತ್ತರ), ಒಲಿಂಪಿಯನ್ ಪಿವಿ ಸಿಂಧು, ನಟಿ ಕಂಗನಾ ರಣಾವತ್ ಸೇರಿದಂತೆ ಪ್ರಮುಖರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದರು.
ಗಾಯಕರಾದ ಸುರೇಶ್ ವಾಡ್ಕರ್ ಮತ್ತು ಅದ್ನಾನ್ ಸಾಮಿ, ಹಿಂದೂಸ್ತಾನಿ ಶಾಸ್ತ್ರೀಯ ಪ್ರತಿಪಾದಕ ಪಂಡಿತ್ ಛನ್ನುಲಾಲ್ ಮಿಶ್ರಾ, ಕೋವಿಡ್-19 ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಐಸಿಎಂಆರ್‌ನ ಮಾಜಿ ಮುಖ್ಯ ಗಾಯಕ ಡಾ. ರಾಮನ್ ಗಂಗಾಖೇಡ್ಕರ್, ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಏರ್ ಮಾರ್ಷಲ್ ಡಾ ಪದ್ಮಾ ಬಂದೋಪಾಧ್ಯಾಯ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಪದ್ಮವಿಭೂಷಣ ಪ್ರಶಸ್ತಿಗೆ ಕರ್ನಾಟಕದ ಡಾ. ಬಿ. ಎಂ. ಹೆಗ್ಡೆ, ಗಾಯಕ ಎಸ್. ಪಿ. ಬಾಲಸುಬ್ರಮಣ್ಯಂ (ಮರಣೋತ್ತರ), ನರಿಂದರ್ ಸಿಂಗ್ ಕಪಾನಿ (ಮರಣೋತ್ತರ), ಮೌಲಾನಾ ವಹೀದುದ್ದೀನ್ ಖಾನ್, ಬಿ. ಬಿ. ಲಾಲ್, ಸುದರ್ಶನ್ ಸಾಹೋ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕದಿಂದ ಕಲೆ ಮಾತಾ ಬಿ. ಮಂಜಮ್ಮ ಜೋಗತಿ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್, ಕ್ರೀಡೆಯಲ್ಲಿ ಕೆ. ವೈ. ವೆಂಕಟೇಶ್ ಸೇರಿದಂತೆ ಪದ್ಮಶ್ರೀ ಪ್ರಶಸ್ತಿಗೆ ಕೊರಳೊಡ್ಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ದೀಪಾವಳಿ ಬೋನಸ್ ಬದಲು ಸೋನ್ ಪಾಪ್ಡಿ ಕೊಟ್ಟ ಬಾಸ್: ನೌಕರರು ಮಾಡಿದ್ದೇನು

Video: ಇರುಮುಡಿ ಹೊತ್ತು ಶಬರಿಮಲೆ 18 ಮೆಟ್ಟಿಲು ಹತ್ತಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಹೊಸ ದಾಖಲೆ

ಆರ್ ಎಸ್ಎಸ್ ನಲ್ಲಿದ್ದ ಅಶೋಕ್ ರೈ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಯಾಕೆ: ಅವರೇ ಹೇಳಿದ್ದು ಹೀಗೆ

ಅಪ್ಪ ಅನಂತ್ ಕುಮಾರ್ ಸುದ್ದಿಗೆ ಬಂದಿದ್ದಕ್ಕೆ ಪ್ರಿಯಾಂಕ್ ಖರ್ಗೆಗೆ ಬೆಂಡೆತ್ತಿದ ಪುತ್ರಿ ಐಶ್ವರ್ಯಾ

ಬಾಡೂಟ ತಿಂದ ಬಳಿಕ ನಿಮ್ಮ ಡಯಟ್ ಹೀಗಿರಬೇಕು

ಮುಂದಿನ ಸುದ್ದಿ
Show comments