Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ರಾಮದಾಸ್‌ ವಿರುದ್ಧ "ಪ್ರೇಮ"ಕುಮಾರಿ ವಾಗ್ದಾಳಿ

ಮಾಜಿ ಸಚಿವ ರಾಮದಾಸ್‌ ವಿರುದ್ಧ
ಮೈಸೂರು , ಸೋಮವಾರ, 9 ಜನವರಿ 2017 (19:23 IST)
ನನಗೆ ಬಂದ ರಾಜಕೀಯ ಹಾಗೂ ಸಿನಿಮಾರಂಗದ ಅವಕಾಶಗಳನ್ನು ಮಾಜಿ ಸಚಿವ ರಾಮದಾಸ್ ಪಿತೂರಿ ಮಾಡಿ ತಪ್ಪಿಸಿದ್ದಾರೆ. ಸಾಮಾಜಿಕ ಹೋರಾಟಕ್ಕಾಗಿ ನಾನು ರಾಜಕೀಯ ಪ್ರವೇಶಿಸುವೆ ಎಂದು ಪ್ರೇಮಕುಮಾರಿ ಬಾಂಬ್ ಸಿಡಿಸಿದ್ದಾರೆ. 
ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಾಮದಾಸ್ ತಮ್ಮ ಹಣ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಿರುಕುಳ ನೀಡಿದ್ದಾರೆ. ನಾನು ಸಾಮಾಜಿಕ ಹೋರಾಟ ಮಾಡಲಿದ್ದೇನೆ. ಇದಕ್ಕಾಗಿ ರಾಜಕೀಯ ಪ್ರವೇಶ ಅನಿವಾರ್ಯವಾಗಿದೆ ಎಂದರು. 
 
ಸರಕಾರದಿಂದ ತನಿಖಾ ವರಿದಿ ಹಾಗೂ ದಾಖಲೆಗಳು ಸೋರಿಕೆಯಾಗಿವೆ. ತಮ್ಮ ಪ್ರಭಾವಿ ಬೀರಿ ನನಗೆ ರಾಜಕೀಯ ಹಾಗೂ ಸಿನಿಮಾರಂಗದಿಂದ ಬಂದ ಅವಕಾಶಗಳನ್ನು ತಪ್ಪಿಸಿದ್ದಾರೆ. ನಾನು ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಹಾಕಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಅನೇಕ ನಾಯಕರನ್ನು ಕೇಳಿಕೊಂಡರೆ ಅವರೂ ಸಹ ಸ್ಪಂದಿಸಿಲ್ಲ ಎಂದು ದೂರಿದರು. 
 
ಕೆಲವು ವರ್ಷಗಳ ಹಿಂದೆ ಮಾಜಿ ಸಚಿವ ರಾಮದಾಸ್ ಹಾಗೂ ಪ್ರೇಮಕುಮಾರಿ ನಡುವಿನ ಪ್ರೇಮ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋಟ್‌ ಬ್ಯಾನ್‌ನಲ್ಲೂ ವಿದೇಶ ಪ್ರಯಾಣಕ್ಕೆ ತೆರಳಿದ ರಾಹುಲ್ ಗಾಂಧಿ: ಸಿಂಹ ಲೇವಡಿ