ದೇಶದ ಅನೇಕ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಫಸಲು ಹಾನಿಯಾಗಿರುವುದಷ್ಟೇ ಅಲ್ಲದೇ ಸಾಗಣೆ ವೆಚ್ಚ ಅಧಿಕವಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ಇಂಧನ ದರ, ಎಲ್‌ಪಿಜಿ ಸಿಲಿಂಡರ್ ಮತ್ತು ಅಗತ್ಯ ವಸ್ತುಗಳ ದರ ಏರಿಕೆಯಿಂದ ಹೈರಾಣಾಗಿರುವ ಗ್ರಾಹಕರಿಗೆ ತರಕಾರಿ ತುಟ್ಟಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅದರಲ್ಲೂ ದಕ್ಷಿಣಭಾರತದಲ್ಲಿ ಕಳೆದ ತಿಂಗಳಿನಿಂದ ಒಂದೇ ರಾಗದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಟೊಮೆಟೊ ಬೆಲೆ ಅಂಬರದೆತ್ತರಕ್ಕೇರಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ದಕ್ಷಿಣಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೊ ಬೆಲೆ ಪ್ರತಿ ಕೆ.ಜಿ.ಗೆ 140 ರೂ.ಗಳಿಗೆ ಮಾರಾಟವಾಗುತ್ತಿದೆ.
ಟೊಮೆಟೊ ಸೇರಿದಂತೆ ತರಕಾರಿ ಬೆಲೆ ಏರಿಕೆಗೆ ಮುಖ್ಯ ಕಾರಣ ಮಳೆ. ಈ ವರ್ಷ ಬಿಸಿಲಿನ ಮುಖ ನೋಡಿದ್ದಕ್ಕಿಂತ ಹೆಚ್ಚು ನೀರಿನ ಹೊಳೆಯನ್ನೇ ನೋಡುವ ಸ್ಥಿತಿ ಎದುರಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟಿದೆ ಟೊಮೆಟೊ ಬೆಲೆ:
ಉತ್ತರ ಭಾರತದಲ್ಲಿ ಕೆ.ಜಿ. ಟೊಮೆಟೊ ಬೆಲೆ 30-83 ರೂ. ಗಳಿಗೆ ಮಾರಾಟವಾಗುತ್ತಿದೆ.
ಪಶ್ಚಿಮ ಪ್ರದೇಶಗಳಲ್ಲಿ ಕೆ.ಜಿ. ಟೊಮೆಟೊ 30 -85 ರೂ. ಗಳಿಗೆ ಮಾರಾಟವಾಗುತ್ತಿದೆ.
ಅಂಡಮಾನ್ ನಿಕೋಬಾರ್‌ನಲ್ಲಿ ಕೆ.ಜಿ ಟೊಮೆಟೊ 140 ರೂ. ಗಳಿಗೆ ಮಾರಾಟವಾಗುತ್ತಿದೆ.
ಕೇರಳದ ತಿರುವನಂತಪುರದಲ್ಲಿ ಕೆ.ಜಿ. ಟೊಮೆಟೊ 140 ರೂ. ಗಳಿಗೆ ಮಾರಾಟವಾಗುತ್ತಿದೆ.
ಅಂಡಮಾನ್ ನಿಕೋಬಾರ್ ನ ಮಾಯಾಬಂದರಿನಲ್ಲಿ ಕೆ.ಜಿ. ಟೊಮೆಟೊ 140 ರೂ.ಗಳಿಗೆ ಮಾರಾಟವಾಗುತ್ತಿದೆ.
ಕೇರಳದ ತಿರುವನಂತಪುರದಲ್ಲಿ ಕೆ.ಜಿ. ಟೊಮೆಟೊ 125 ರೂ.ಗಳಿಗೆ ಮಾರಾಟವಾಗುತ್ತಿದೆ.
ತಮಿಳುನಾಡು ಕೆ.ಜಿ. ಟೊಮೆಟೊ 125 ರೂ.ಗಳಿಗೆ ಮಾರಾಟವಾಗುತ್ತಿದೆ.
ಕರ್ನಾಟಕದ ಮಂಗಳೂರು ತುಮಕೂರಿನಲ್ಲಿ ಕೆ.ಜಿ. ಟೊಮೆಟೊ 102 ರೂ.ಗಳಿಗೆ ಮಾರಾಟವಾಗುತ್ತಿದೆ.
ಧಾರವಾಡ 75 ರೂ., ಮೈಸೂರಿನಲ್ಲಿ 74 ರೂ., ಶಿವಮೊಗ್ಗದಲ್ಲಿ 67ರೂ., ಬೆಂಗಳೂರಿನಲ್ಲಿ 57 ರೂ.ಗಳಿಗೆ ಕೆ.ಜಿ. ಟೊಮೆಟೊ ಮಾರಾಟವಾಗುತ್ತಿದೆ.