ಕೇಂದ್ರ ಸರ್ಕಾರದಿಂದ ಪದೇ ಪದೆ ಕನ್ನಡ ಕಡಗಣನೆ ಹಾಗೂ ಹಿಂದಿ ಹೇರಿಕೆ ಮುಂದುವರಿಕೆ ವಿರೋಧಿಸಲಾಗಿದೆ.CRPFನ ಹುದ್ದೆಗಳ ಆಹ್ವಾನ ದಲ್ಲಿ ಮತ್ತೊಮ್ಮೆ ಇದೀಗ ಹಿಂದಿ ಏರಿಕೆ ಮಾಡಿದೆ.ಹಿಂದಿ ಏರಿಕೆ ವಿರುದ್ದ ಕರವೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ಹೊರಹಾಕಿದ್ದಾರೆ.
CRPF ನಿಂದ 9212 ಪೋಸ್ಟ್ ಗಳಿಗೆ ನೋಟಿಫಿಕೇಶನ್ ಬಿಡುಗಡೆಯಾಗಿದೆ.ಕರ್ನಾಟಕದಿಂದ 456 ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ ಆಹ್ವಾನ ಪತ್ರಿಕೆ ನೀಡುವ ಕಾರ್ಯ ಶುರುವಾಗಿದೆ.ಆಹ್ವಾನ ಪತ್ರಿಕೆಯಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಅಳವಡಿಸಲಾಗಿದೆ.ಇದು ನಮ್ಮ ರಾಜ್ಯದ ಜನತೆಗೆ ಹಿಂದಿ ಭಾಷೆಯನ್ನ ಹೇರುವಂತಹ ಕಾರ್ಯವಾಗಿದೆ.ಈ ಹಿಂದೆಯೂ ರೈಲ್ವೆ ಇಲಾಖೆ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಬೇಕೆಂದು ನಾವು ಧ್ವನಿಯೆತ್ತಿದ್ದೆವು.ಮಮತಾ ಬ್ಯಾನರ್ಜಿಯವರು ಎಲ್ಲಾ 24 ಪ್ರಾದೇಶಿಕ ಭಾಷೆಗಳಲ್ಲಿ ರೈಲ್ವೆ ಇಲಾಖೆಯ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದರು.ಈ ಬಾರಿಯ ಸಿಆರ್ಪಿಎಫ್ ಪರೀಕ್ಷೆಯಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಆಯ್ಕೆಯಿದೆ ಅಷ್ಟೇ ಈ ಬಗ್ಗೆ ಈಗಾಗಲೇ ತಮಿಳುನಾಡು ಆಂಧ್ರಪ್ರದೇಶ ಹಾಗೂ ಕೇರಳ ಸರ್ಕಾರ ಧ್ವನಿ ಎತ್ತಿದೆ.ನಮ್ಮ ರಾಜ್ಯ ಸರ್ಕಾರ ಯಾವುದೇ ರೀತಿಯ ಎಚ್ಚರಿಕೆಯನ್ನು ವಹಿಸಿಕೊಂಡಿಲ್ಲ .ನಮ್ಮ ರಾಜ್ಯದ ಯುವಕರ ಮೇಲೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಕಾಳಜಿ ಇಲ್ಲ.ನಮ್ಮ ನಾಡಲ್ಲಿ ನೆಲೆದಿರುವ ಹಲವರಿಗೆ ಹಿಂದಿ ಭಾಷೆಯು ಓದಲು ಬರೆಯಲು ಬರುವುದಿಲ್ಲ.ಆದ್ದರಿಂದ ನಮ್ಮ ಮೇಲೆ ಹಿಂದಿ ಭಾಷೆಯ ದಬ್ಬಾಳಿಕೆ ಮಾಡಬಾರದೆಂದು ಮನವಿ ಮಾಡಲಾಗಿದ್ದು,ನಮ್ಮ ಯುವಕರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕೆಂದು ಪ್ರವೀಣ್ ಶೆಟ್ಟಿ ಒತ್ತಾಯ ಮಾಡಿದ್ದಾರೆ.