Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯರಿಂದ ಕೇಂದ್ರ ಯೋಜನೆಗಳು ಹೈಜಾಕ್: ಪ್ರತಾಪ್ ಸಿಂಹ

ಸಿಎಂ ಸಿದ್ದರಾಮಯ್ಯರಿಂದ ಕೇಂದ್ರ ಯೋಜನೆಗಳು ಹೈಜಾಕ್: ಪ್ರತಾಪ್ ಸಿಂಹ
ಮೈಸೂರು , ಶುಕ್ರವಾರ, 14 ಜುಲೈ 2017 (15:29 IST)
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ಯೋಜನೆಗಳನ್ನು ಹೈಜಾಕ್ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
 
ಕೇಂದ್ರದ ಹಣದಲ್ಲಿ ಸಿಎಂ ಜಾತ್ರೆ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆಗಳ ಅನುಷ್ಠಾನ ಬಗ್ಗೆ ರಾಜ್ಯ ಸರಕಾರ ನನಗೆ ಮಾಹಿತಿ ನೀಡುತ್ತಿಲ್ಲ. ಇಂದು ಕೇಂದ್ರ ಸರಕಾರದ ಯೋಜನೆ ಅನುಷ್ಠಾನ ಕುರಿತಂತೆ ಒಂದು ಗಂಟೆ ಹಿಂದೆ ಕಾರ್ಯಕ್ರಮದ ಮಾಹಿತಿ ಲಭಿಸಿದೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. 
 
ಮುಖ್ಯಮಂತ್ರಿಗಳೇ ನಿಮ್ಮ ಮೆಚ್ಯೂರಿಟಿ ಪಾಠ ನನಗೆ ಬೇಕಾಗಿಲ್ಲ. ನಿಮ್ಮ ಪುತ್ರ ಡಾ,ಯತೀಂದ್ರ ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ ಅಧಿಕಾರಿಗಳ ಸಭೆ ಕರಿತಾರೆ. ಅವರಿಗೆ ನೀವು ಮೆಚ್ಯೂರಿಟಿ ಪಾಠ ಹೇಳಿಕೊಡಿ ಎಂದು ತಿರುಗೇಟು ನೀಡಿದ್ದಾರೆ. 
 
ಕೇಂದ್ರ ಸರಕಾರದ ಹೊಸಬೆಳಕು ಯೋಜನೆಯಡಿ ಮೈಸೂರಿನ ಸುತ್ತಮುತ್ತಲಿರುವ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯನವರೇ ಮಾಡಿದ್ದಾರೆ. ಕಾರ್ಯಕ್ರಮದ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪರಪ್ಪನ ಅಗ್ರಹಾರ ರಹಸ್ಯ ಭೇದಿಸಲು ಸಿಎಂ ಆದೇಶ