ಕೂಲ್ ಡ್ರಿಂಕ್ಸ್ ವ್ಯಾಪಾರಿ ನಷ್ಟ ಭರಿಸಿದ ಪ್ರತಾಪ್

Webdunia
ಮಂಗಳವಾರ, 2 ಮೇ 2023 (17:00 IST)
ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ನೇತೃತ್ವದಲ್ಲಿ ಭವ್ಯ ಸಾರ್ವಜನಿಕ ಸಮಾವೇಶ ನಡೆದಿತ್ತು. ಸಮಾವೇಶದ ಸಮೀಪ ಕೂಲ್ ಡ್ರಿಂಕ್ಸ್ ಮಾರಲು ಸಮೀರ್​​ ಎಂಬಾತ ಬಂದಿದ್ದ. ಸಮಾರಂಭದಲ್ಲಿ ಭಾಗವಹಿಸಿದ್ದ ಜನರು, ಈ ವಾಹನವನ್ನು ಬಿಜೆಪಿಯವರೇ ತರಿಸಿದ್ದಾರೆ. ಬೇಸಿಗೆಯ ಬಿಸಿಲಿನ ಧಗೆ, ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಬಿಜೆಪಿಯವರೇ ಕಲ್ಪಿಸಿರುವ ವ್ಯವಸ್ಥೆಯಿದು ಎಂದು ತಿಳಿದು, ಎಲ್ಲರೂ ಗಾಡಿಗೆ ಮುತ್ತಿಗೆ ಹಾಕಿ, ಕೂಲ್ ಡ್ರಿಂಕ್ಸ್​​​ ಖಾಲಿ ಮಾಡಿದ್ರು. ಸುಮಾರು 35 ಸಾವಿರ ನಷ್ಟವನ್ನು ಅನುಭವಿಸಿದ ಸಮೀರ್ ಸಾಬ್​ ಕಣ್ಣೀರು ಹಾಕಿದ್ರು. ಈ ನಷ್ಟವನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಭರಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಸಮೀರ್ ಹಸನ್ ಸಾಬ್​ಗೆ ಹಣ ಕಳುಹಿಸಿ ‘ಸಾರಿ ಬ್ರದರ್’ ಎಂದು ಕ್ಷಮೆಯಾಚಿಸಿ, ಧನ್ಯವಾದಗಳು ಎಂದು ಹೇಳಿದ್ದಾರೆ. ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಹರಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಸಹಾಯಕರಾದ ಮಲ್ಲಿಕಾರ್ಜುನ ಖರ್ಗೆ: ಇನ್ನು ರಾಹುಲ್ ಗಾಂಧಿಯೇ ಬರಬೇಕು

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ, ಮಕ್ಕಳ ಮೇಲೆ ಪರಿಣಾಮವೇನು ಗೊತ್ತಾ

ದುಬೈ ಏರ್ ಶೋ ದುರಂತ, ತಾಯ್ನಾಡಿಗೆ ಪೈಲೆಟ್ ನಮನ್ಶ್‌ ಸಿಯಾಲ್ ಪಾರ್ಥಿವ ಶರೀರ

ಕರೂರು ಕಾಲ್ತುಳಿತ ಬೆನ್ನಲ್ಲೇ ಪಕ್ಷದ ಮುಖಂಡರ ಸಭೆ ಕರೆದ ನಟ ವಿಜಯ್

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ಮುಂದಿನ ಸುದ್ದಿ
Show comments