ರೇವತಿಯನ್ನು ಚಾಮುಂಡೇಶ್ವರಿ ನಮ್ಮ ಮನೆಗೆ ಕಳುಹಿಸಿದ ಪ್ರಸಾದ: ಸೊಸೆ ಗುಣಗಾನ ಮಾಡಿದ ಕುಮಾರಸ್ವಾಮಿ

Sampriya
ಭಾನುವಾರ, 10 ನವೆಂಬರ್ 2024 (10:54 IST)
Photo Courtesy X
ಬೆಂಗಳೂರು: ರೇವತಿ ನಮಗೆ ಆ ತಾಯಿ ಚಾಮುಂಡೇಶ್ವರಿ ನಮ್ಮ ಮನೆಗೆ ಕೊಟ್ಟ ಪ್ರಸಾದ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸೊಸೆಯನ್ನು ಹಾಡಿಹೊಗಳಿದರು.

ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆ, ಮಗ, ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರ ಕುಮಾರಸ್ವಾಮಿ ಅವರು ಸಾಮಂದಿಪುರದಲ್ಲಿ ಪ್ರಚಾರ ಮಾಡಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಸೊಸೆ ರೇವತಿ ಸಾಮಂದಿಪುರದ ಮೊಮ್ಮಗಳು. ನಮಗೂ ಈ ಗ್ರಾಮಕ್ಕೂ ಬಾಂಧವ್ಯ ಇದೆ ಎಂದರು.

ಈ ಗ್ರಾಮವು ಅವರ ಸೊಸೆ ತಿ ಅವರ ಅಜ್ಜಿಯ ತವರು ಮನೆ. ರೇವತಿ ಅವರು ಆ ಹಳ್ಳಿಯ ಮೊಮ್ಮಗಳು. ಈ ವಿಷಯವನ್ನು ಸಭಿಕರೊಬ್ಬರು ಸಚಿವರಿಗೆ ನೆನಪಿಸಿಕೊಟ್ಟರು. ಈ ವಿಷಯ ಗಮನಕ್ಕೆ ಬರುತ್ತಿದ್ದ ಹಾಗೇ ಸೊಸೆಯನ್ನು ಗುಣಗಾನ ಮಾಡಿದ್ದಾರೆ.  

ಈ ವಿಷಯ ಗಮನಕ್ಕೆ ಬಂದ ಕೂಡಲೇ ಕ್ಷಣಕಾಲ ಭಾವುಕರಾದ ಹೆಚ್‌ ಡಿ ಕುಮಾರಸ್ವಾಮಿ ಅದು ಕೋವಿಡ್ ಸಮಯ ನಿಖಿಲ್ ಕುಮಾರಸ್ವಾಮಿ ಮದುವೆ ನಡೆಯಿತು. ಮಗನ ಮದುವೆಯಲ್ಲಿ ರಾಮನಗರ ಚನ್ನಪಟ್ಟಣ, ಮಂಡ್ಯ ಭಾಗದ ಎಲ್ಲಾ ಜನತೆಗೆ ಊಟ ಹಾಕಿಸಬೇಕೆಂಬ ಮಹಾದಾಸೆ ನನಗಿತ್ತು. ಆದರೆ ಕೊರೊನಾ ಕಾರಣಕ್ಕೆ ಅದು ಸಾಧ್ಯ ಆಗಲಿಲ್ಲ. ಆ ಬಗ್ಗೆ ನಮ್ಮ ಕುಟುಂಬಕ್ಕೆ ಅತೀವ ನೋವಿದೆ ಎಂದು ಹೇಳಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಶಬರಿಮಲೆಯಲ್ಲಿ ಭಕ್ತರಿಗೆ ತೊಂದರೆ, ಕೇರಳ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಅಣ್ಣಾಮಲೈ

ಜೆಡಿಎಸ್‌ನಲ್ಲಿಯೇ ಇರುತ್ತಿದ್ದರೆ ದೇವೇಗೌಡ, ಅವರ ಮಕ್ಕಳು ಸಿಎಂ ಆಗಕ್ಕೆ ಬಿಡ್ತಿರ್ಲಿಲ್ಲ: ಸಿದ್ದರಾಮಯ್ಯ

ದೆಹಲಿ ವಿಮಾನವೇರಿದ ಡಿಕೆಶಿ, ಶಾಸಕರನ್ನು ಇಲ್ಲೇ ಕಟ್ಟಿಹಾಕಲು ಸಿಎಂ ಮಾಸ್ಟರ್ ಪ್ಲಾನ್‌

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಮುಂದಿನ ಸುದ್ದಿ
Show comments