Webdunia - Bharat's app for daily news and videos

Install App

ಆಸ್ಪತ್ರೆಗೆ ಬರುವಾಗಲೂ ಪ್ರಜ್ವಲ್ ರೇವಣ್ಣ ಸುತ್ತ ಮಹಿಳಾ ಅಧಿಕಾರಿಗಳು

Krishnaveni K
ಶುಕ್ರವಾರ, 31 ಮೇ 2024 (13:11 IST)
ಬೆಂಗಳೂರು:  ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಇದೀಗ ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆತರಲಾಗಿದೆ.

ವಿಶೇಷವೆಂದರೆ ಆಸ್ಪತ್ರೆಗೆ ಕರೆತರುವಾಗಲೂ ಮಹಿಳಾ ಎಸ್ಐಟಿ ಅಧಿಕಾರಿಗಳ ತಂಡವೇ ಪ್ರಜ್ವಲ್ ರನ್ನು ಕರೆತಂದಿದೆ. ಪ್ರಜ್ವಲ್ ನಿನ್ನೆ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೇ ಕಾದು ಕುಳಿತಿದ್ದ ಎಸ್ ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ನಿನ್ನೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೇ ಎಸ್ ಐಟಿ ಅಧಿಕಾರಿಗಳ ವಾಹನದಲ್ಲೇ ಅವರನ್ನು ಕರೆದೊಯ್ಯಲಾಯಿತು. ಈ ವೇಳೆ ವಾಹನದಲ್ಲಿ ಐವರು ಮಹಿಳಾ ಅಧಿಕಾರಿಗಳಿದ್ದರು. ಒಬ್ಬ ಚಾಲಕನನ್ನು ಬಿಟ್ಟರೆ ವಾಹನದಲ್ಲಿ ಎಲ್ಲರೂ ಮಹಿಳಾ ಅಧಿಕಾರಿಗಳೇ ಇದ್ದರು.

ಇದೇ ಮಹಿಳಾ ಅಧಿಕಾರಿಗಳ ತಂಡವೇ ಇಂದು ಪ್ರಜ್ವಲ್ ನನ್ನು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆತಂದಿದೆ. ಸಂತ್ರಸ್ತ ಮಹಿಳೆಯರು ಧೈರ್ಯವಾಗಿ ದೂರು ನೀಡಬಹುದು ಎಂದು ಸಂದೇಶ ನೀಡುವ ಸಲುವಾಗಿ ಈ ರೀತಿ ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರನ್ನು ಕರೆತರುತ್ತಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ