Webdunia - Bharat's app for daily news and videos

Install App

Prajwal Revanna: ಮನೆಕೆಲಸದಾಕೆ ಜೊತೆ ಅಪ್ಪ ಎಚ್ ಡಿ ರೇವಣ್ಣ, ಮಗ ಪ್ರಜ್ವಲ್ ರಾಸಲೀಲೆ ಒಂದಾ ಎರಡಾ ಚಾರ್ಜ್ ಶೀಟ್ ನಲ್ಲಿ ಬಯಲು

Krishnaveni K
ಶನಿವಾರ, 24 ಆಗಸ್ಟ್ 2024 (09:50 IST)
ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣ ಮತ್ತು ಮಗ ಪ್ರಜ್ವಲ್ ರೇವಣ್ಣ ರಾಸಲೀಲೆಗಳು ಈಗ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ ಅಪ್ಪ-ಮಗನ ರಾಸಲೀಲೆಯ ವಿವರ ಬಯಲಾಗಿದೆ. ಪ್ರಜ್ವಲ್ ಬಸವನಗುಡಿಯ ಮನೆಯಲ್ಲಿ ದೂರುದಾರ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ನಿಜ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಇನ್ನು ಎಚ್ ಡಿ ರೇವಣ್ಣ ಹಣ್ಣು ಕೊಡುವ ನೆಪದಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಈಗ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ, ಪ್ರಜ್ವಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಸ್ ಐಟಿ ಅಧಿಕಾರಿಗಳು ಒಟ್ಟು 2144 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 150 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ.

ಚಾರ್ಜ್ ಶೀಟ್ ನಲ್ಲಿ ಪ್ರಜ್ವಲ್ ಬಗ್ಗೆ ಏನೇನಿದೆ?
ಬೆಂಗಳೂರಿನ ಮನೆಯಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ದರು. ಸಂತ್ರಸ್ತೆಯ ಹೊಟ್ಟೆ ಹಿಸುಕುವುದು, ತಬ್ಬಿಕೊಳ್ಳುವುದು ಮಾಡುತ್ತಿದ್ದ. ಹೇಳಿದ್ದು ಕೇಳದೇ ಇದ್ದರೆ ಕಥೆ ಮುಗಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಸಂತ್ರಸ್ತೆಯ ಮಗಳಿಗೂ ವಿಡಿಯೋ ಕಾಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಸಂತ್ರಸ್ತೆಯ ಮಗಳಿಗೆ ಕರೆ ಮಾಡಿ ಎದೆ ಭಾಗ ತೋರಿಸುವಂತೆ ಒತ್ತಾಯಿಸಿದ್ದ. ಒಪ್ಪದೇ ಇದ್ದಾಗ ನೀನು ನನ್ನ ಜೊತೆ ಸಂಬಂಧವಿಟ್ಟುಕೊಂಡಿದ್ದೀಯಾ ಎಂದು ತಾಯಿ ಮತ್ತು ಮನೆಯವರಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಆತಂಕಗೊಂಡ ಆಕೆ ಖಾಸಗಿ ಭಾಗವನ್ನು ತೋರಿಸಿದ್ದಳು. ಇದನ್ನು ಸ್ಕ್ರೀನ್ ಶಾಟ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ಹರಿಯಬಿಟ್ಟಿದ್ದ.

ಹೊಳೆನರಸೀಪುರದ ಮನೆಯ ಮೊದಲ ಮಹಡಿಯಲ್ಲಿ ಮನೆಗೆಲಸದಾಕೆ ಕೆಲಸ ಮಾಡುತ್ತಿದ್ದಾಗ ಆಕೆಯ ಸೆರಗು ಎಳೆಯುತ್ತಿದ್ದ ಪ್ರಜ್ವಲ್ ತಬ್ಬಿಕೊಳ್ಳುವುದು ಮಾಡುತ್ತಿದ್ದ. 2020 ರಲ್ಲಿ ಬಸವನಗುಡಿ ಮನೆಯ ಸ್ವಚ್ಛತೆ ಮಾಡುವ ನೆಪದಲ್ಲಿ ಆಕೆಯನ್ನು ಕರೆದೊಯ್ದು ಅತ್ಯಾಚಾರ ಮಾಡಿದ್ದ. ಬೆಳಿಗ್ಗೆ 10.30 ರ ವೇಳೆಗೆ ಭವಾನಿ ರೇವಣ್ಣ ವಾಕಿಂಗ್ ಹೋಗಿದ್ದಾಗ ಕೃತ್ಯವೆಸಗಿದ್ದ. ಸಂತ್ರಸ್ತೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ರೂಂ ಲಾಕ್ ಮಾಡಿಕೊಂಡಿದ್ದ.  ಬಳಿಕ ಈಗ ನಡೆದಿರುವ ವಿಚಾರ ಬೇರೆಯವರಿಗೆ ಹೇಳಿದರೆ ನಿನ್ನ ಗಂಡನನ್ನು ಜೈಲಿಗೆ ಹಾಕಿಸುತ್ತೇನೆ, ನಿನ್ನ ಮಗಳಿಗೂ ನಿನಗೆ ಆದ ಗತಿಯನ್ನೇ ತೋರಿಸುತ್ತೇನೆ, ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದೇ ರೀತಿ ಹಲವು ಮಹಿಳೆಯರ ವಿಡಿಯೋ ಮಾಡಿಕೊಂಡಿದ್ದ.

ಎಚ್ ಡಿ ರೇವಣ್ಣ ಏನು ಮಾಡ್ತಿದ್ದರು
ತಂದೆ ಎಚ್ ಡಿ ರೇವಣ್ಣ ಕೂಡಾ ಮನೆಗೆಲಸದಾಕೆಯ ಮೇಲೆ ಕಣ್ಣು ಹಾಕಿದ್ದರು. ಪತ್ನಿ ಭವಾನಿ ರೇವಣ್ಣ ಇಲ್ಲದ ಸಮಯ ನೋಡಿಕೊಂಡು ಕೊಠಡಿಗೆ ಹಣ್ಣು ಕೊಡುವ ನೆಪದಲ್ಲಿ ರೇವಣ್ಣ ಮನೆಕೆಲಸದಾಕೆಯನ್ನು ಕರೆಯುತ್ತಿದ್ದರು. ರೂಮಿಗೆ ಕರೆದು ಬೇಕೆಂದೇ ಕೈ ಹಿಡಿದೆಳೆಯುವುದು, ಅಸಭ್ಯವಾಗಿ ಸ್ಪರ್ಶಿಸುವುದು ಮಾಡುತ್ತಿದ್ದರು. ಅಲ್ಲಿಂದ ಜಾಗ ಖಾಲಿ ಮಾಡಲು ನೋಡಿದರೆ ನಾನೇನು ಮಾಡಲ್ಲ ಬಾ ಎಂದು ಸಂತ್ರಸ್ತೆಯ ಕೈ ಹಿಡಿದೆಳೆಯುತ್ತಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ರೇವಣ್ಣಗೆ ಇಂದು ಬಿಗ್ ಡೇ: ಜೈಲಲ್ಲೇ ಢವ ಢವ

Karnataka Weather: ಈ ಜಿಲ್ಲೆಗಳನ್ನು ಬಿಟ್ಟು ಉಳಿದೆಡೆ ಇಂದು ಮಳೆಗೆ ಬಿಡುವು

ಅಪ್ತಾಪ್ತೆ ಮೇಲೆ ನಿರಂತರ ರೇಪ್ ಮಾಡಿ, ಗರ್ಭಪಾತ: ಪುತ್ತೂರಿನ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಪ್ರಕಟ

ಮತಗಳ್ಳತನ: ರಾಹುಲ್ ನೇತೃತ್ವದಲ್ಲಿ ಆ.5 ರಂದು ಪ್ರತಿಭಟನೆ, ಡಿಕೆ ಶಿವಕುಮಾರ್

ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆತಾಗಿ ನಟಿ ಖುಷ್ಬು ಸುಂದರ್‌ ಜವಾಬ್ದಾರಿ

ಮುಂದಿನ ಸುದ್ದಿ