Select Your Language

Notifications

webdunia
webdunia
webdunia
webdunia

ಪ್ರಧಾನಮಂತ್ರಿ ಈ ಯೋಜನೆಯಡಿ 436 ರೂ. ಕಟ್ಟಿದರೆ 2 ಲಕ್ಷ ರೂ ಪರಿಹಾರ: ವಿವರಗಳಿಗೆ ಇಲ್ಲಿ ನೋಡಿ

PM Modi

Krishnaveni K

ಬೆಂಗಳೂರು , ಬುಧವಾರ, 10 ಜುಲೈ 2024 (10:05 IST)
ಬೆಂಗಳೂರು: ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿ ಪ್ರತಿ  ವರ್ಷ 436 ರೂ ಕಟ್ಟಿದರೆ ಯಾವುದೇ ಕಾರಣದಿಂದ ಸಾವಾದರೂ 2 ಲಕ್ಷ ರೂ. ಪರಿಹಾರ ಸಿಗುತ್ತದೆ. ಪ್ರಧಾನ ಮಂತ್ರಿ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಮಾಹಿತಿ ನೀಡಿದ್ದಾರೆ. ಇದನ್ನು ಜನರಿಗೆ ತಲುಪಿಸಲು ಸೂಚನೆ ನೀಡಿದ್ದಾರೆ. ಅಪಘಾತ ಅಥವಾ ಯಾವುದೇ ಕಾರಣಕ್ಕೆ ಅಕಾಲಿಕವಾಗಿ ಸಾವನ್ನಪ್ಪಿದ್ದಾಗ ನಿಮ್ಮ ಕುಟುಂಬಸ್ಥರಿಗೆ ಪರಿಹಾರ ಹಣ ಸಿಗುತ್ತದೆ.

ಈ ಯೋಜನೆಗೆ 18 ರಿಂದ 50 ವರ್ಷದೊಳಗಿನನವರು ಅರ್ಹರಾಗಿರುತ್ತಾರೆ. ಇದೇ ರೀತಿ ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ ಎಂದಿದ್ದು ಈ ಯೋಜನೆಯಲ್ಲಿ ವಾರ್ಷಿಕ 20 ರೂ. ಪ್ರೀಮಿಯಂ ಪಾವತಿರಿಸಿದರೆ ಅಪಘಾತದಲ್ಲಿ ಅಥವಾ ಆಕಸ್ಮಿಕವಾಗಿ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ 1 ಲಕ್ಷ ರೂ ಪಾಲಿಸಿ ಮೊತ್ತ ಸಿಗಲಿದೆ ಎಂದಿದ್ದಾರೆ. 18 ರಿಂದ 70 ವರ್ಷದೊಳಗಿನವರು ಈ ಯೋಜನೆಗೆ ಅರ್ಹರಿರುತ್ತಾರೆ.

ಈಗಾಗಲೇ ಈ ಯೋಜನೆಯನ್ನು ಜೀವನ ಜ್ಯೋತಿ ಭೀಮಾ ಯೋಜನೆಯಲ್ಲಿ 72.85 ಲಕ್ಷ ಮತ್ತು ಸುರಕ್ಷಾ ಯೋಜನೆಯನ್ನು 1.74 ಕೋಟಿ ಜನ ತೊಡಗಿಸಿಕೊಂಡಿದ್ದಾರೆ. ಇಂತಹ ಮಾಹಿತಿಗಳು ಜನರಿಗೆ ಮತ್ತಷ್ಟು ತಿಳಿದು ಹೆಚ್ಚು ಜನ ಈ ಯೋಜನೆಗಳ ಫಲಾನುಭವಿಗಳಾಗಬೇಕು ಎಂದು ಸಿಎಂ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆಯ ಅಬ್ಬರ: ಮುಂದಿನ 48 ಗಂಟೆ ಎಚ್ಚರ