Publish Date: Thu, 06 Jun 2024 (13:17 IST)
Updated Date: Thu, 06 Jun 2024 (13:22 IST)
ಬೆಂಗಳೂರು: ಚಿಕ್ಕ ಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ ಕೆ ಸುಧಾಕರ್ ಗೆದ್ದರೆ ರಾಜಕೀಯ ನಿವೃತ್ತಿ ಮತ್ತು ರಾಜೀನಾಮೆ ನೀಡುವುದಾಗಿ ಹೇಳಿದ್ದ ಪ್ರದೀಪ್ ಈಶ್ವರ್ ಈಗ ಮಾತು ತಪ್ಪಿದಂತೆ ಕಾಣುತ್ತಿದೆ.
ಸುಧಾಕರ್ ಗೆಲ್ಲುತ್ತಿದ್ದಂತೇ ಅವರ ಅಭಿಮಾನಿಗಳು ಪ್ರದೀಪ್ ಶಪಥದ ವಿಡಿಯೋ ವೈರಲ್ ಮಾಡಿದ್ದರು. ಕೂಡಲೇ ಪ್ರದೀಪ್ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದರು. ಈ ನಡುವೆ ಕೆಲವು ಕಿಡಿಗೇಡಿಗಳು ಪ್ರದೀಪ್ ಮನೆಗೆ ಕಲ್ಲೆಸೆದಿದ್ದರು.
ಇನ್ನೊಂದು ಬೆಳವಣಿಗೆಯಲ್ಲಿ ಪ್ರದೀಪ್ ರಾಜೀನಾಮೆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಅದಕ್ಕೀಗ ಶಾಸಕರ ಆಪ್ತರು ಸ್ಪಷ್ಟನೆ ನೀಡಿದ್ದಾರೆ.
ಶಾಸಕರು ರಾಜೀನಾಮೆ ನೀಡಿಲ್ಲ. ಇದೆಲ್ಲಾ ಸುಳ್ಳು ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಪ್ರದೀಪ್ ರಾಜೀನಾಮೆ ಪರ್ವ ಸುಳ್ಳು ಎಂದು ತಿಳಿದುಬಂದಿದೆ. ಈಗಲೂ ಸುಧಾಕರ್ ಅಭಿಮಾನಿಗಳು, ನೆಟ್ಟಿಗರು ವಿವಿಧ ಮೆಮೆಗಳ ಮೂಲಕ ಪ್ರದೀಪ್ ಈಶ್ವರ್ ಅವರನ್ನು ಟ್ರೋಲ್ ಮಾಡುವುದನ್ನು ಬಿಟ್ಟಿಲ್ಲ.