ಬೆಂಗಳೂರು(ಜು.16): ಇಂದು ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ. ಭೂಗತ ಕೇಬಲ್ ಅಳವಡಿಕೆ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆ, ನಗರದ ವಿವಿಧ ಏರಿಯಾಗಳಲ್ಲಿ ಪವರ್ ಕಟ್ ಆಗಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ತಲಕಾವೇರಿ ಬಡಾವಣೆ, ಬಾಹುಬಲಿ ನಗರ, ಸಂತೋಷ ನಗರ, ಕೆ.ಕೆ.ಆಸ್ಪತ್ರೆ ರಸ್ತೆ, ಎನ್ಇಎಸ್ ಬಸ್ ನಿಲ್ದಾಣ ರಸ್ತೆ, ರೈಲ್ವೆ ಪರ್ಯಾಯ ರಸ್ತೆ, ಟೆಲಿಕಾಂ ಬಡಾವಣೆ, ಅಟ್ಟೂರು ಬಡಾವಣೆ, ಮುನೇಶ್ವರ ಬಡಾವಣೆ, ಸಂತೋಷ ನಗರ, ವೀರಸಾಗರ ಮುಖ್ಯರಸ್ತೆ, ಮಹಾತ್ಮ ಗಾಂಧಿ ಬಡಾವಣೆ- ಪ್ರದೇಶಗಳಲ್ಲಿ ಇಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.ಕೆನರಾ ಬ್ಯಾಂಕ್ ಬಡಾವಣೆ, ಸರ್ ಎಂ ವಿಶ್ವೇಶ್ವರಯ್ಯ, ಧನಲಕ್ಷ್ಮಿ ಬಡಾವಣೆ, ಪಾರ್ವತಮ್ಮ ಬಡಾವಣೆ, ಮರಿಯಪ್ಪನ ಪಾಳ್ಯ, ಸುಬ್ರಹ್ಮಣ್ಯ ನಗರ 7 ಮತ್ತು 8ನೇ ಮುಖ್ತರಸ್ತೆ, ಎಲ್.ಎನ್.ಪುರ, ದೇವಯ್ಯ ಪಾರ್ಕ್, ವಯ್ಯಾಲಿಕಾವಲ್, ನೆಹರೂ ನಗರ, ಮಲ್ಲೇಶ್ವರ 11ನೇ ಮುಖ್ಯರಸ್ತೆ, ಹೊಸ ಬಿಇಎಲ್ ರಸ್ತೆ, ಜಲದರ್ಶನಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಆಗಲಿದೆ. ಈ ಭಾಗದ ಜನ ವಿದ್ಯುತ್ ಸಂಬಂಧಿತ ನಿತ್ಯದ ಚಟುವಟಿಗಳನ್ನು ಬೆಳಗ್ಗೆ 10 ಗಂಟೆ ಒಳಗೆ ಹಾಗೂ ಸಂಜೆ 6 ಗಂಟೆಯ ಬಳಿಕ ಮಾಡಿಕೊಳ್ಳುವುದು ಒಳಿತು. ಇಂದು ಪವರ್ ಕಟ್ ಸಮಸ್ಯೆಗೆ ತಕ್ಕಂತೆ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ. ಬೆಸ್ಕಾಂ ಮನವಿಗೆ ಸಹಕರಿಸಬೇಕು ಎಂದು ನಿಗಮ ಕೇಳಿಕೊಂಡಿದೆ.