ಬೆಂಗಳೂರು-ನಗರದಲ್ಲಿ ಬಿಜೆಪಿ ಇಂದ 28ಕ್ಕೆ 28ಕ್ಷೇತ್ರ ಗೆಲ್ಲುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.28ಕ್ಕೆ 28ಕ್ಷೇತ್ರ ಯಾಕೆ, 523 ಕ್ಷೇತ್ರ ಗೆಲ್ಲಲಿ.ಯಾರು ಬೇಡ ಅಂತ ಹೇಳ್ತಾರೆ.?ವಿಧಾನಸಭೆ ಚುನಾವಣೆಯಲ್ಲಿ 224 ಗೆಲ್ತೀವಿ ಅಂತ ಹೇಳಿದ್ರು.ಆದ್ರೆ ನಾವು 136 ಸ್ಥಾನ ಗೆಲ್ಲೋದಾಗಿ ಹೇಳಿದ್ದೆವು.
ಇನ್ನೂ 2 ವರ್ಷಕ್ಕೆ ನಿಗಮ ಮಂಡಳಿ ಸೀಮಿತ ವಿಚಾರವಾಗಿ ನಮ್ಮ ರಾಜಕೀಯ ಎಲ್ಲರಿಗೂ ಶೇರ್ ಆಗಬೇಕು.ಬೇರೆಯವರಿಗೂ ಅಧಿಕಾರ ಹಂಚಬೇಕು.ಆದೃಷ್ಟಿಯಿಂದ ಎಲ್ಲರಿಗೂ ಹೇಳಿದ್ದೇವೆ.ಎರಡು ವರ್ಷ ಅಂತ ಹೇಳಿದ್ದೇವೆ.ಶೀಘ್ರವೇ ಚುನಾವಣೆ ಬರಲಿದೆ, ಸ್ವಲ್ಪ ದಿನ ಕೋಡ್ ಆಪ್ ಕಂಡಕ್ಟ್ ಬರಲಿದೆ.ಈಗಾಗಲೇ ಆರು ತಿಂಗಳು ಮುಗಿದಿದೆ.ಎರಡು ವರ್ಷ ಆದ ಮೇಲೆ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು.ಇದರ ಹಿಂದೆ ಪಾರ್ಟಿ, ಹೈಕಮಾಂಡ್ ಸ್ಟಾಂಡ್ ಇದೆ.ಅದನ್ನ ನಾವು ಪಾಲಿಸ್ತಿದ್ದೇವೆ.ಇದರ ಹಿಂದೆ ಸಿದ್ದರಾಮಯ್ಯ ಆಗಲಿ ಡಿಕೆ ಶಿವಕುಮಾರ್ ಸ್ಟಾಂಡ್ ಏನೂ ಇಲ್ಲ.
ಪಕ್ಷಕ್ಕೆ ಅನೇಕ ಜನ ದುಡಿದವರಿದ್ದಾರೆ.ಪಕ್ಷ ಅಧಿಕಾರಕ್ಕೆ ತಂದವರಿದ್ದಾರೆ.ಅವರೆಲ್ಲರಿಗೂ ಅಧಿಕಾರ ಸಿಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು.ಇನ್ನೂ ಬಿಹಾರದಲ್ಲಿ ಸರ್ಕಾರ ಪತನ ವಿಚಾರವಾಗಿ ಈಗ ಏನಿಲ್ಲ.ನೀವು ಸುದ್ದಿ ಮಾಡ್ತಿದ್ದೀರಿ.ಮುಂದೆ ಏನಾಗುತ್ತೆ ನೋಡಿ ಮಾತಾಡ್ತೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.