Webdunia - Bharat's app for daily news and videos

Install App

ಗಿಡಗಳ ಕಳ್ಳರಿದ್ದಾರೆ ಎಚ್ಚರಿಕೆ

Webdunia
ಬುಧವಾರ, 26 ಜನವರಿ 2022 (14:11 IST)
ಪ್ಯಾಂಟ್‌, ಷರ್ಟ್‌ ಧರಿಸಿ ಕಾರಿನಲ್ಲಿ ಬರುವ ಯುವತಿಯೊಬ್ಬಳು ಮನೆಯ ಎದುರಿಗಿರುವ ಕುಂಡಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಸಂಜಯ ನಗರ ಠಾಣೆಯ ಆರ್‌ಎಂವಿ ಎರಡನೇ ಸ್ಟೇಜ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆಯ ಎದುರಿಗಿರುವ ಕುಂಡಗಳು ಬೆಳಗಾಗುವುದರೊಳಗೆ ಕಾಣೆಯಾಗುತ್ತಿದ್ದವು. ಮೊನ್ನೆ ಕೂಡ ಕಾವ್ಯ ಸೆಲ್ವಂ ಎನ್ನುವವರು ಮನೆಯಲ್ಲಿ ಹೀಗೆಯೇ ಆಗಿದೆ. ನಂತರ ಈ ಕಳ್ಳತನ ಮಾಡಿರುವವರು ಯಾರು ಎಂದು ನೋಡುವ ಸಲುವಾಗಿ ಸಿಸಿಟಿವಿ ಪರಿಶೀಲನೆ ಮಾಡಲಾಗಿದೆ. ಆ ಸಿಸಿಟಿವಿಯಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಯುವತಿಯೊಬ್ಬಳು ಹೂವಿನ ಕುಂಡಗಳನ್ನು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ.
 
ಅವರು ಸಿಸಿಟಿವಿಯ ದೃಶ್ಯಾವಳಿಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಡಿದ್ದರು. ಯುವತಿ ಕಳ್ಳತನ ಮಾಡುವ ಉದ್ದೇಶದಿಂದ ಕಾರನ್ನು ರಸ್ತೆಯ ಮಧ್ಯದಲ್ಲಿ ತಂದು ನಿಲ್ಲಿಸಿದ್ದಳು. ಕಾರಿನಲ್ಲಿ ಡ್ರೈವರ್‌ ಇದ್ದಾನೆ. ಈ ಯುವತಿ ಅತ್ತ ಇತ್ತ ನೋಡುತ್ತಾ ಕಳ್ಳರಂತೆ ಬಂದು ಎರಡು ಹೂಕುಂಡಗಳನ್ನು ಕದ್ದು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡಿದ್ದಾಳೆ. ಇವಿಷ್ಟೂ ಸಿಸಿಟಿವಿಯಲ್ಲಿ ದಾಖಲಾಗಿದೆ.
 
ಇದನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದ ಕಾವ್ಯಾ ಅವರು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ತನಿಖೆ ನಡೆಸಲು ಹೇಳಿದ್ದರು. ನಂತರ ಕಾರಿನ ನಂಬರನ್ನೂ ಕೂಡ ಅದರಲ್ಲಿ ಹಾಕಿದ್ದರು. ಆದರೆ ಸದ್ಯ ಟ್ವಿಟರ್‌ ಖಾತೆಯಲ್ಲಿನ ಈ ವಿಡಿಯೋ ಡಿಲೀಟ್‌ ಆಗಿದ್ದು, ಕಾರಣ ತಿಳಿದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರಾವಳಿಯಲ್ಲಿ ರಣಭೀಕರ ಮಳೆ ನಡುವೆ ಮುಂದಿನ 24ಗಂಟೆ ಹೇಗಿರಲಿದೆ ಗೊತ್ತಾ ಹವಾಮಾನ

ಭ್ರಷ್ಟಾಚಾರ ಆರೋಪ ಹೊತ್ತಿರುವವರು, ಪಬ್‌ಗಳಲ್ಲಿ ಗಲಾಟೆ ಮಾಡಿದವರಿಗೆ ಕೊನೆಗೂ ಮಂತ್ರಿಸ್ಥಾನ

ಕೊನೆಗೂ ಡಿಕೆ ಶಿವಕುಮಾರ್ ಸಂಪುಟ ಸೇರಿದ 19 ಸಚಿವರು ಇವರೇ

ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧದ ಎಫ್ಐಆರ್ ಹಿಂಪಡೆಯುವ ಬಗ್ಗೆ ದೆಹಲಿ‌ ಕೋರ್ಟ್ ಮಹತ್ವದ ಸೂಚನೆ

ಎಲ್ಲಾ ಶಾಸಕರಿಗೂ ಒಂದೇ ಬಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಸಾಧ್ಯವಿಲ್ಲ

ಮುಂದಿನ ಸುದ್ದಿ
Show comments