ರಸ್ತೆ ಗುಂಡಿಯಿಂದ ಅಪಘಾತ ಸಾವು ಕಂಟ್ರ್ಯಾಕ್ಟರ್ ಮೇಲೆ ಕೇಸ್

Webdunia
ಬುಧವಾರ, 1 ಡಿಸೆಂಬರ್ 2021 (17:52 IST)
ರಸ್ತೆ ಗುಂಡಿಯಿಂದಾಗಿ ಸ್ಕೂಟರ್ ಸವಾರ ಕೆಳಕ್ಕೆ ಬಿದ್ದು ಮತ್ತೊಂದು ವಾಹನಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಸಂಚಾರ ಪೊಲೀಸರು ಬಿಬಿಎಂಪಿ ಅಸಿಸ್ಟೆಂಟ್​ ಎಕ್ಸಿಕ್ಯುಟೀವ್ ಇಂಜಿನಿಯರ್​(ಎಇಇ) ಮತ್ತು ಖಾಸಗಿ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಿದ್ದಾರೆ.ನ.27ರ ಮಧ್ಯಾಹ್ನ 1.30ರ ವೇಳೆಗೆ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಅಜೀಂ ಅಹ್ಮದ್(21) ಸ್ಕೂಟರ್‌ನಲ್ಲಿ ಹೆಗಡೆನಗರದ ಕಡೆಗೆ ಹೋಗುತ್ತಿದ್ದರು. ರಸ್ತೆ ಗುಂಡಿ ಗಮನಿಸದೆ ಗುಂಡಿಗೆ ಸ್ಕೂಟರ್ ಬಿಟ್ಟಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು. ಅದೇ ಸಮಯಕ್ಕೆ ಹಿಂದಿನಿಂದ ಅತಿವೇಗವಾಗಿ ಬಂದ 407 ಗೂಡ್ಸ್ ವಾಹನ ಸವಾರನ ಬಲಗಾಲಿನ ತೊಡೆಯ ಮೇಲೆ ಚಲಿಸಿತ್ತು. ತೊಡೆ ಮತ್ತು ಬಲಗೈಗೆ ಗಾಯವಾಗಿ ರಕ್ತಸ್ರಾವ ಉಂಟಾದ ಅಜೀಂರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಂಜೆ ಅಸುನೀಗಿದ್ದರು. ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ಬರದಂತೆ ತಡೆಯಲು ಈ ಮೂರು ಕೆಲಸ ತಪ್ಪದೇ ಮಾಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕನ್ನಡಕ್ಕಿಂತ ಪರಭಾಷೆಗಳಲ್ಲೇ ಇರುವ ಪ್ರಕಾಶ್ ರಾಜ್ ಗೆ ಯಾಕೆ ರಾಜ್ಯೋತ್ಸವ ಪ್ರಶಸ್ತಿ: ನೆಟ್ಟಿಗರ ತರಾಟೆ

ಮುಟ್ಟಾಗಿದ್ದು ನಿಜಾನಾ ಎಂದು ಮಹಿಳೆಯರ ಬಟ್ಟೆ ಬಿಚ್ಚಲು ಹೇಳಿದ ಮೇಲ್ವಿಚಾರಕ

ಕೋರ್ಟ್ ಹೇಳಿದ್ರೂ ಬೆಲೆಯಿಲ್ವಾ: ಪ್ರಿಯಾಂಕ್ ಖರ್ಗೆ ವಿರುದ್ಧ ನೆಟ್ಟಿಗರು ಕಿಡಿ

ಮುಂದಿನ ಸುದ್ದಿ
Show comments