Select Your Language

Notifications

webdunia
webdunia
webdunia
webdunia

ಬಡರೋಗಿಗಳಿಗೆ ಆಸ್ಪತ್ರೆಯಲ್ಲೇ ಮತಾಂತರಕ್ಕೆ ಆಮಿಷ

Christian Conversion, Kalburgi ESI Hospital, Hindu Workers

Sampriya

ಕಲಬುರಗಿ , ಮಂಗಳವಾರ, 15 ಅಕ್ಟೋಬರ್ 2024 (17:37 IST)
Photo Courtesy X
ಕಲಬುರಗಿ: ಕೇರಳ ಮೂಲದ ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬ ಇಲ್ಲಿನ ಇಎಸ್‌ಐ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪ್ರೇರೆಪಿಸುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಹಿನೋ ಡಾಲಿಚಾನ್​​ ಎಂಬ ವಿದ್ಯಾರ್ಥಿಯೊಬ್ಬ ಕ್ರೈಸ್ತ ಧರ್ಮದ ಕರಪತ್ರಗಳನ್ನು ಹಿಡಿದು ರೋಗಿಗಳ ಬಳಿ ನಿಮ್ಮ ರೋಗ ಜೌಷಧಿ ಹಾಗೂ ಇಂಜೆಕ್ಷನ್‌ನಿಂದ ವಾಸಿಯಾಗುವುದಿಲ್ಲ. ಬದಲಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಬನ್ನಿ. ಯೆಸುವಿನ ದಾರಿಯಲ್ಲಿ ನಡೆದು ನಿಮ್ಮ ರೋಗಗಳನ್ನ ದೂರ ಮಾಡಿಕೊಳ್ಳಿ ಎಂದು ಹೇಳುತ್ತಿದ್ದನು.

ಇನ್ನೂ ಈ ವಿಚಾರ ತಿಳಿದು ಹಿಂದೂ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಬಳಿಕ, ವಿದ್ಯಾರ್ಥಿ ಹಿನೋ ಡಾಲಿಚಾನ್​ನನ್ನು ಹಿಡಿದು ಪ್ರಶ್ನಿಸಿದಾಗ, ತಾನು ಎಂಬಿಬಿಎಸ್​ ವಿದ್ಯಾರ್ಥಿ ಎಂದು ಹೇಳಿದ್ದಾನೆ. ಅಲ್ಲದೇ ತಾನು ಕೇವಲ ಓದಲು ಪೇಪರ್​​ ನೀಡುತ್ತಿದ್ದೇನೆ ಎಂದು ಹೇಳಿದ್ದಾನೆ.

ಆಗ ಹಿಂದೂ ಸಂಘಟನೆ ಕಾರ್ಯಕರ್ತರು ವಿದ್ಯಾರ್ಥಿಯನ್ನು ಹಿಡಿದು ತಪಾಸಣೆ ನಡೆಸಿದಾಗ, ಆತನ ಬ್ಯಾಗ್​ನಲ್ಲಿ ಕ್ರೈಸ್ತ್​ ಧರ್ಮದ ಕೆಲ ಅಂಶಗಳು ಮಳಯಾಳಂ ಮತ್ತು ಕನ್ನಡದಲ್ಲಿ ಬರೆದಿರುವ ಪುಸ್ತಕ ಪತ್ತೆಯಾಗಿದೆ.

ಹಿನೋ ನಡೆಗೆ ಹಿಂದೂ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡರು. ಮತಾಂತರಕ್ಕೆ ಯತ್ನಿಸಿದ ವಿದ್ಯಾರ್ಥಿ ಹಿನೋ ಡಾಲಿಚಾನ್ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗುಲ್ಬರ್ಗಾ ವಿವಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಪೂರ್ಣ ಅನುದಾನ: ಸಿಎಂ ಸಿದ್ದರಾಮಯ್ಯ