ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡಲು ಕೇಂದ್ರ ಸಂಪುಟ ಜಾರಿಗೆ ತಂದ ಕೆಂಪು ಗೂಟದ ಕಾರು ನಿಷೇಧದ ನಿಯಮ ಹಲವೆಡೆ ರಾಜಕಾರಣಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಹಿಂದೆ ಕೆಂಪುಗೂಟದ ಕಾರು ತಡೆಯುವುದರಿಂದ ಏನೂ ಬದಲಾವಣೆ ಆಗಲ್ಲ, ಅವರ ಭದ್ರತೆಯನ್ನ ತಗ್ಗಿಸಲಿ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದರು. ಇದೀಗ, ಕಾಗೋಡು ತಿಮ್ಮಪ್ಪ ಸಹ, ನಾವೇನೂ ಇಷ್ಟ ಪಟ್ಟು ಕೆಂಪು ಗೂಟದ ಕಾರು ಪಡೆದಿಲ್ಲ. ಸರ್ಕಾರದ ನಿಯಮದನ್ವಯ ಅಳವಡಿಸಲಾಗಿದೆ ಕೇಂದ್ರ .ಸರ್ಕಾರ ತೆಗೆಯುವುದಾರೆ ತೆಗೆಯಲಿ ಎಂದು ಉತ್ತರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಹ ನಾನೇಕೆ ಕೆಂಪು ಗೂಟವನ್ನ ತೆಗೆಯಬೇಕು..? ಮೇ1ರಿಂದ ನಿಯಮ ಜಾರಿಗೆ ಬಂದಾಗ ತೆಗೆಯುತ್ತೇನೆ ಎಂದು ಉತ್ತರಿಸಿದ್ದಾರೆ. ನಿನ್ನೆ ಸಿಎಂಗೆ ಮಹಿತಿ ನೀಡದೇ ಸಿಬ್ಬಂದಿ ಕಾರಿನ ಕೆಂಪುಗೂಟವನ್ನ ತೆಗೆದಿದ್ದ ಬಗ್ಗೆ ಸಿಬ್ಬಂದಿ ವಿರುದ್ಧ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ರು. ನನಗೆ ಅರಿವಿಲ್ಲದಂತೆ ಕೆಂಪುಗೂಟ ತೆಗೆಯಲಾಗಿದೆ ಎಂದು ಹೇಳಿದ್ದರು.