Publish Date: Sat, 08 Feb 2020 (13:02 IST)
Updated Date: Sat, 08 Feb 2020 (13:04 IST)
ಬಿಜೆಪಿ ನೇತೃತ್ವದ ಸರಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ರಾಜಕೀಯ ಕುತೂಹಲ ಹೆಚ್ಚುತ್ತಿದೆ. ಮೂಲ ಬಿಜೆಪಿಗರು ಸಿಎಂ ಮೇಲೆ ಮುನಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಹೆಚ್.ಡಿ.ಕೆ. ಮತ್ತೆ ಸಿಎಂ ಆಗ್ತಾರಾ?
ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಕಿಂಗ್ ಮೇಕರ್ ಆಗೇ ಆಗ್ತಾರೆ. ಹೀಗಂತ ಗಟ್ಟಿ ಧ್ವನಿಯಲ್ಲಿ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿರೋದು ಹಲವು ಆಯಾಮಗಳಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಸಚಿವ ಸ್ಥಾನ ಸಿಗದೇ ಬೇಸರಗೊಂಡಿರೋ ಮೂಲ ಬಿಜೆಪಿಗರು ಪಕ್ಷ ಬಿಡೋದಕ್ಕೆ ಮನಸ್ಸು ಮಾಡ್ತಿದ್ದಾರೆ. ಈ ಬಾರಿ ನಡೆಯೋದು ಬೇರೆ ಆಪರೇಷನ್ ಅಂತ ಬಿಜೆಪಿಗೆ ನೇರವಾಗಿ ಟಾಂಗ್ ನೀಡಿದ್ದಾರೆ.