ಅಂಬರೀಶ್ ನಿಧನಕ್ಕೆ ಸಂತಾಪ ಸೂಚಿಸಿದ ರಾಜಕೀಯ ಗಣ್ಯರು

Webdunia
ಭಾನುವಾರ, 25 ನವೆಂಬರ್ 2018 (08:48 IST)
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ರಾಜಕೀಯ ರಂಗದ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ,’ ಹಿರಿಯ ನಟ, ಮಾಜಿ ಸಚಿವ ಮತ್ತು ದೀರ್ಘಕಾಲದ ನನ್ನ ಗೆಳೆಯ ಅಂಬರೀಷ್ ಅವರ ಸಾವು ದಿಗ್ಭ್ರಮೆ‌ ಉಂಟು ಮಾಡಿದೆ. ತೀರಾ ಅನಿರೀಕ್ಷಿತ ಸಾವು. ಚಿತ್ರರಂಗ ಮತ್ತು ರಾಜಕೀಯರಂಗ ಎರಡರಲ್ಲಿಯೂ ಜನಮನ ಗೆದ್ದ ನಾಯಕ ಅಂಬರೀಷ್.‌ ನಿಜವಾದ ಅರ್ಥದಲ್ಲಿ‌ ಅಜಾತಶತ್ರು. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿ ಎಂದು ಟ್ವೀಟ್ ಮಾಡಿದ್ದಾರೆ.


ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಅವರ ಸಾವಿನಿಂದ ಅವರ ಅಪಾರ ಅಭಿಮಾನಿಗಳಿಗಾಗಿರುವ ಆಘಾತ, ದು:ಖ, ನೋವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.‌ ಈ ಸಂದರ್ಭದಲ್ಲಿ ಎಲ್ಲರೂ ಶಾಂತಿ‌ ಮತ್ತು ಸಂಯಮವನ್ನು ಕಾಪಾಡಿಕೊಂಡು ಮೃತ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿ ಎಂದು ಸಿದ್ದರಾಮಯ್ಯ ಮನವಿಮಾಡಿದ್ದಾರೆ.


ಮಂಡ್ಯದ ಘೋರ ದುರಂತವೊಂದನ್ನು ಕೇಳಿದ ನಂತರ ಇದೀಗ ರಾಜಕೀಯವಾಗಿ ನನ್ನ ಜೊತೆ ಹೆಜ್ಜೆ ಹಾಕಿದ್ದ ಅಂಬರೀಶ್ ಅವರು ಸಹಾ ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವು ಅಮೂಲ್ಯವಾದ ರತ್ನವನ್ನು ಕಳೆದುಕೊಂಡಿದ್ದು, ನಮ್ಮನ್ನು ಅಗಲಿರುವ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.


ಅಂಬರೀಶ್ ನಿಧನಕ್ಕೆ ಸಂತಾಪ ಸೂಚಿಸಿದ ಡಿಸಿಎಂ ಜಿ.ಪರಮೇಶ್ವರ್ ಅವರು ಅಪಘಾತದ ನೋವನ್ನು ಜೀರ್ಣಿಸಿಕೊಳ್ಳುತ್ತಿರುವಾಗಲೇ ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ನಿಧನ ಆಘಾತವನ್ನುಂಟು ಮಾಡಿದೆ. ರಾಜ್ಯ ಹಾಗೂ ಮಂಡ್ಯದ ಪಾಲಿಗೆ ಇಂದು ಕರಾಳ ದಿನ. ಅಂಬರೀಶ್ ಅವರ ಕುಟುಂಬಕ್ಕೆ ಭಗವಂತ ನೋವನ್ನು ಸಹಿಸುವ ಶಕ್ತಿ ನೀಡಲಿ. ಚಿತ್ರರಂಗ ಹಾಗೂ ರಾಜ್ಯ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಉಡುಪಿ ರೋಡ್ ಶೋ ಆರಂಭ live video

ಅಧಿಕಾರ ಹಂಚಿಕೆ ಫೈಟ್ ನಡುವೆಯೇ ಹೈಕಮಾಂಡ್ ಮೀಟಿಂಗ್ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪೋಟಕ ಹೇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕರ್ನಾಟಕ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗಲೇ ತಮ್ಮ ನಿರ್ಧಾರ ಪ್ರಕಟಿಸಿದ ಡಿಕೆ ಶಿವಕುಮಾರ್

ಉಡುಪಿ ಕೃಷ್ಣನ ಊರಿನಲ್ಲಿ ಪ್ರಧಾನಿ ಮೋದಿ ಇಂದು ಏನೇನು ಮಾಡಲಿದ್ದಾರೆ

ಮುಂದಿನ ಸುದ್ದಿ
Show comments