Select Your Language

Notifications

webdunia
webdunia
webdunia
webdunia

ವಿಧಾನಸೌಧದಲ್ಲಿಯೇ ಕಾರಿನಲ್ಲಿ ಸಾಗಿಸುತ್ತಿದ್ದ 2.5 ಕೋಟಿ ಹಣ ವಶ

ವಿಧಾನಸೌಧದಲ್ಲಿಯೇ ಕಾರಿನಲ್ಲಿ ಸಾಗಿಸುತ್ತಿದ್ದ 2.5 ಕೋಟಿ ಹಣ ವಶ
ಬೆಂಗಳೂರು , ಶುಕ್ರವಾರ, 21 ಅಕ್ಟೋಬರ್ 2016 (17:15 IST)
ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 2.5 ಕೋಟಿ ರೂಪಾಯಿ ಹಣವನ್ನು ವಿಧಾನಸೌಧ ಪೊಲೀಸರು ವಶಪಡಿಸಿಕೊಂಡಿದ್ದಾರೆ.
 
ಸಿದ್ಧಾರ್ಥ ಎನ್ನುವ ವ್ಯಕ್ತಿ ವೊಕ್ಸ್‌ವ್ಯಾಗನ್ ಕಾರ್ ತೆಗೆದುಕೊಂಡು ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಕಾರು ಪರಿಶೀಲನೆ ನಡೆಸಿರುವ ಭದ್ರತಾ ಸಿಬ್ಬಂದಿಗೆ ಮೂರು ಬಾಕ್ಸ್‌ಗಳಲ್ಲಿ 2.5 ಕೋಟಿ ರೂಪಾಯಿ ಹಣ ಇರುವುದನ್ನು ಖಚಿತ ಪಡಿಸಿಕೊಂಡು, ಕೂಡಲೇ ವಿಧಾನಸೌಧ ಪೊಲೀಸ್‌ರಿಗೆ ಮಾಹಿತಿ ನೀಡಿದ್ದಾರೆ.
 
ಆರೋಪಿ ಸಿದ್ಧಾರ್ಥನನ್ನು ವಶಕ್ಕೆ ಪಡೆದಿರುವ ವಿಧಾನಸೌಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 
 
ಸಚಿವರಿಗೆ ನೀಡಲು ತಂದಿದ್ದ ಹಣ?
 
ಟೆಂಡರ್‌ಗೋಸ್ಕರ್ ಸಚಿವರೊಬ್ಬರಿಗೆ ಹಣ ನೀಡಲು ಧಾರವಾಡ್ ಮೂಲದ ವಕೀಲ ಸಿದ್ಧಾರ್ಥ 2.5 ಕೋಟಿ ರೂಪಾಯಿ ಹಣವನ್ನು ವಿಧಾನಸೌಧಕ್ಕೆ ತಂದಿದ್ದ ಎನ್ನುವ ಕುರಿತು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಕಲಾವಿದರ ಮೇಲೆ ನಿರ್ಬಂಧವಿಲ್ಲ : ಕೇಂದ್ರ ಸರ್ಕಾರ