Publish Date: Mon, 17 Jul 2017 (13:04 IST)
Updated Date: Mon, 17 Jul 2017 (13:16 IST)
ಬಿಜೆಪಿ ಮುಖಂಡ ಈಶ್ವರಪ್ಪ ಪಿಎ ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಯಡಿಯೂರಪ್ಪ ಪಿಎ ಸಂತೋಷ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
ತುಮಕೂರು ಜಿಲ್ಲೆಯ ನೊಣವಿನಕೆರೆಯಲ್ಲಿರುವ ಯಡಿಯೂರಪ್ಪ ಪಿಎ ಸಂತೋಷ್ ಅವರ ಮನೆಗೂ ಭೇಟಿ ನೀಡಿರುವ ಪೊಲೀಸರು ಮನೆ ಮುಂದೆ ನೋಟಿಸ್ ಅಂಟಿಸಿ ಬಂದಿದ್ದಾರೆ. ಮಹಾಲಕ್ಷ್ಮೀ ಪುರಂ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೊಟಿಸ್ ಅಂಟಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತ, ಬಂಧನ ಭೀತಿ ಎದುರಿಸುತ್ತಿರುವ ಬಿಎಸ್`ವೈ ಪಿಎ ಸಂತೋಷ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಯಡಿಯೂರಪ್ಪ, ರಾಜಕೀಯ ಉದ್ದೇಶದಿಂದ ನನ್ನ ಪಿಎ ಸಂತೋಷ್ ಬಂಧನಕ್ಕೆ ಷಡ್ಯಂತ್ರ ನಡೆಯುತ್ತಿದೆ. ಸರ್ಕಾರದ ವಿರುದ್ಧ ನಾನು ಟೀಕೆ ಮಾಡುತ್ತಿರುವುದರಿಂದ ನಿರಪರಾಧಿಯಾದ ಸಂತೋಷ್ ಬಂಧನಕ್ಕೆ ಮುಂದಾಗಿದ್ದಾರೆ. ಸಂತೋಷ್`ಗಾಗಿ ನನ್ನ ಮನೆಗೂ ಆಗಮಿಸಿದ್ದ ಪೊಲೀಸರು ಹುಡುಕಾಟ ನಡೆಸಿದ್ದರು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.